ಇಂದು ಎಸ್ಸೆಸ್ಸೆಲ್ಸಿ . ಫಲಿತಾಂಶ ಬೆಳಗ್ಗೆ 10.30ಕ್ಕೆ ಪ್ರಕಟ
karresults.nic.in
Voiceofjanata : ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್ ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಮೇ 9ರಂದು ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ដជួយ https:// karresults.nic.in ನಲ್ಲಿ ಬೆಳಗ್ಗೆ 10.30ರಿಂದ ಫಲಿತಾಂಶ ವೀಕ್ಷಿಸಲು ಸಾಧ್ಯವಾಗಲಿದೆ. ಒಂದು ವೇಳೆ ಅಡತಡೆಯಾದಲ್ಲಿ ಮಧ್ಯಾಹ್ನ 3 ಘಂಟೆಗೆ ಫಲಿತಾಂಶ ಹೊರಗೆ ಬರುವ ಸಾಧ್ಯತೆ ಇದೆ. ಮಾ.25ರಿಂದ ಏ.6ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು. ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.