ರಾಯಚೂರು : ಜಿಲ್ಲೆಯಲ್ಲಿ ಇಂದು ನಡೆದ ಎಸೆಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ಮುಗಿದಿದ್ದು ಜಿಲ್ಲೆಯಲ್ಲಿ ಒಟ್ಟಾರೆ 28329 ಪರೀಕ್ಷೆ ಬರೆದಿದ್ದು, 1107 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ರಾಯಚೂರು ಜಿಲ್ಲೆಯಾದ್ಯಾಂತ ಇಂದು ನಡೆದಂತಹ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ 29,436 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಲಾಗಿತ್ತು. ಇಂದಿನ ಪರೀಕ್ಷೆಯಲ್ಲಿ 28,329 ಹಾಜರಾಗಿ ಪರಿಕ್ಷೆ ಬರೆದಿದರೆ, 1,107 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗೈರು ಹಾಜರಾಗಿದ್ದಾರೆ.
ಇನ್ನು ತಾಲೂಕುವಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದ ಅಂಕಿ ಸಂಖ್ಯೆಯ ನೋಡುವುದಾದರೆ.
ದೇವದುರ್ಗ : 4071 ವಿದ್ಯಾರ್ಥಿಗಳಲ್ಲಿ, 3879 ಪರೀಕ್ಷೆ ಬರೆದಿದ್ದು, 192 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಲಿಂಗಸಗೂರು – 6035 ವಿದ್ಯಾರ್ಥಿಗಳಲ್ಲಿ, 5846 ಪರೀಕ್ಷೆ ಬರೆದಿದ್ದು, 189 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಮಾನವಿ : 5497 ವಿದ್ಯಾರ್ಥಿಗಳಲ್ಲಿ, 5290 ಪರೀಕ್ಷೆ ಬರೆದಿದ್ದು, 207 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ರಾಯಚೂರು : 8002 ವಿದ್ಯಾರ್ಥಿಗಳಲ್ಲಿ, 7705 ಪರೀಕ್ಷೆ ಬರೆದಿದ್ದು, 297 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಸಿಂಧನೂರು : 5831 ವಿದ್ಯಾರ್ಥಿಗಳಲ್ಲಿ, 5609 ಪರೀಕ್ಷೆ ಬರೆದಿದ್ದು, 222 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಒಟ್ಟಾರೆಯಾಗಿ ರಾಯಚೂರು ಜಿಲ್ಲೆಯಾದ್ಯಂತ
ನಡೆದ ಪರೀಕ್ಷೆಯಲ್ಲಿ ರಾಯಚೂರು ಮತ್ತು ಸಿಂಧನೂರು ತಾಲೂಕುಗಳಲ್ಲಿ ಪರೀಕ್ಷೆಗೆ ಗೈರಾಗಿದ್ದು ಕಂಡುಬರುತ್ತದೆ.