ಲಿಂಗಸೂಗೂರು: ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದ ಮಸ್ಕಿ ಕ್ರಾಸ್ ಗೆ ಹೋಗುವ ರಸ್ತೆಯಲ್ಲಿರುವ ಚೌಕ್ ಮಸೀದಿಯಲ್ಲಿ ಶ್ರೀನಿವಾಸ ಕುಲಕರ್ಣಿ ಅವರು ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟವನ್ನು ಏರ್ಪಡಿಸಿದ್ದರು. ಈ ವೇಳೆ ಮುಸ್ಲಿಂ ಬಾಂಧವರು ಶ್ರೀನಿವಾಸ್ ಕುಲಕರ್ಣಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವೆಲ್ಲರೂ ಒಂದೇ ಭಾರತಾಂಬೆಯ ಮಕ್ಕಳು. ನಾವು ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರ ಹಾಗೆ ಇದ್ದೀವಿ. ಮುಂದೆ ಕೂಡ ಹೀಗೆ ಇರುತ್ತೇವೆ ಎಂದು ಹೇಳಿದರು.
ನಂತರ ಕರವೇ ಅಧ್ಯಕ್ಷ ಎಸ್ ಎ ನಯೀಮ್ ಮಾತನಾಡಿ ಐತಿಹಾಸಿಕ ಮುದಗಲ್ ಪಟ್ಟಣದ ಹಿರಿಯರು ಹಾಗೂ ನಮ್ಮ ಮಾರ್ಗದರ್ಶಕ ರಾಗಿ ರುವ ಶ್ರೀನಿವಾಸ್ ಕುಲಕರ್ಣಿ ಅವರು ಇವತ್ತು ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟ ಏರ್ಪಡಿಸಿದ್ದು ನೋಡಿದರೆ ನಮಗೆ ಪೇಜಾವರ ಮಠದ ಶ್ರೀಗಳು ನೆನಪಾಗುತ್ತಾರೆ. ಅವರು ಉಡುಪಿಯ ತಮ್ಮ ಮಠದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟವನ್ನು ಏರ್ಪಡಿಸಿ ಮಠದಲ್ಲಿಯೇ ನಮಾಜ್ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟು ಭಾವೈಕ್ಯತೆಯನ್ನು ಸಾರಿದ್ದರು. ಸ್ವಾಮೀಜಿಯವರ ಅವರ ಹಾದಿಯಲ್ಲಿ ಶ್ರೀನಿವಾಸ್ ಕುಲಕರ್ಣಿ ಅವರು ಸಾಗುತ್ತಾ ಮುಸ್ಲಿಂ ಸಮಾಜದ ಬಂಧುಗಳಿಗೆ ಇಫ್ತಿಯಾರ್ ಕೂಟವನ್ನು ಏರ್ಪಡಿಸಿರುತ್ತಾರೆ. ಅವರಿಗೆ ಈಶ್ವರ, ಅಲ್ಲಾಹ ಉತ್ತಮ ಆರೋಗ್ಯ, ಐಶ್ವರ್ಯ ಕೊಟ್ಟು ನೂರುವರ್ಷ ಆಯುಷ್ಯ ಕೊಡಲಿ ಎಂಬುದು ನಮ್ಮ ಪ್ರಾರ್ಥನೆ ಯಾಗಿದೆ ಎಂದು ಹೇಳಿದರು. ಅಲ್ಲದೆ ಮುಸ್ಲಿಂ ಸಮಾಜದ ಪರವಾಗಿ ಅವರಿಗೆ ಧನ್ಯವಾದಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಮೀರ್ ಬೇಗ್ ಉಸ್ತಾದ್, ಕಾಂಗ್ರೇಸ್ ಮುಖಂಡ ನ್ಯಾಮತ್ ಖಾದ್ರಿ, ಸೈಯದ್ ಸಾಬ್ ಹಳೇಪೇಟೆ, ಖಾಲಿದ್, ಶೇಖ್ ಹುಸೇನ್ ಷರೀಫ್ ವಕೀಲರು , ಸೈಯದ್ ಸಾಬ್, ಮೌಲಾನ ಜಾಫರ್, ಮೌಲಾನಾ ಅಬ್ದುಲ್ ಘನಿ, ಅಬ್ದುಲ್ಲಾ, ಪ್ಯಾರೆ ಸಾಹೇಬ್, ತನ್ವೀರ್ ಖಾಜಿ, ಹಾಜಿ ಸಾಬ್, ಉಪಸ್ಥಿತರಿದ್ದರು.