ಅಫಜಲಪುರ : ತಾಲೂಕಿನ ಸುಕ್ಷೇತ್ರ ಮಣ್ಣೂರ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತಿದೆ. 16 ರಂದು ಸೋಮವಾರ ಆಗಿ ಹುಣ್ಣಿಮೆಯಂದು ಬೆಳಿಗ್ಗೆ 5 ಗಂಟೆಗೆ ಷ, ಬ್ರ, ಡಾ!! ಶಂಭುಲಿಂಗ ಶಿವಾಚಾರ್ಯರು ಪಡಸಾವಳಗಿ ಉದಗಿರ ಮಠ ಅವರಿಂದ ದೇವಿಯ ರುದ್ರಾಭಿಷೇಕ ಜರುಗಿತು. 7 ಗಂಟೆಗೆ ದೇವಿಯ ವಸ್ತ್ರಾಭರಣ 9 ಗಂಟೆಯಿಂದ ನೈವೇದ್ಯ ಅರ್ಪಣೆ, ಸಾಯಂಕಾಲ 4 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಭೀಮಾ ನದಿಯಲ್ಲಿರುವ ಶ್ರೀ ಯಲ್ಲಮ್ಮ ದೇವಿ ಮಂದಿರಕ್ಕೆ ಹೋಗುವ ಕಾರ್ಯಕ್ರಮ 5 ಗಂಟೆಗೆ ಬಾಸಿಂಗ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಸ್ವಾಗತಿಸಲಾಯಿತು. 7 ರಿಂದ 9 ಗಂಟೆಯವರೆಗೆ ಮದ್ದು ಸುಡುವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆಯಲ್ಲಿ ನವಿಲು ಕುಣಿತ, ಕುದುರೆ ಕುಣಿತ, ಕರಡಿ ಕುಣಿತ ಸಂಪ್ರದಾನಿವಾದನ, ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ದೇವಿಯ ಮಂದಿರಕ್ಕೆ ಆಗಮಿಸಿತು.
ರಾತ್ರಿ ಗೀ ಗೀ ಪದಗಳು ನಡೆದವು. 17 ರಂದು ಸಾಯಂಕಾಲ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ ಕುಸ್ತಿಗಳು ಜರುಗಿದವು. ಜಾತ್ರೆಯ ಅಂಗವಾಗಿ ಮಹಾಕಾಳಿ ಮಂದಿರ ಹಾಗೂ ಹೊಸ ಪಾದಗಟ್ಟೆ ಹತ್ತಿರ ಜಾನುವಾರುಗಳ ಜಾತ್ರೆ ನಡೆಯುತ್ತಿದೆ. ಜಾತ್ರೆಯಲ್ಲಿ ಉತ್ತಮ ಜಾನುವಾರುಗಳಿಗೆ ಶ್ರೀ ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿಯಿಂದ ಬಹುಮಾನ ವಿತರಿಸಲಾಗುವುದು ಎಂದು ಶ್ರೀ ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿಯವರು ತಿಳಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.