ಗ್ರಾಮೀಣ ಪ್ರತಿಭೆಗಳಿಗೆ ಬರವಿಲ್ಲ ; ಬಿ.ಡಿ. ಪಾಟೀಲ..
ಅರ್ಜುಣಗಿ ಗ್ರಾಮದ ಯುವಕ ಅಂತಾರಾಷ್ಟ್ರೀಯ ಖೋ ಖೋ ಆಯ್ಕೆ..
ಇಂಡಿ : ಗ್ರಾಮೀಣ ಪ್ರದೇಶದ ಪ್ರತೀಭೆಗಳಿಗೆ ಬರವಿಲ್ಲ. ಅಂತಹವರಿಗೆ ಸೂಕ್ತ ತರಬೇತಿ ಹಾಗೂ ಅವಕಾಶಗಳನ್ನು ನೀಡಬೇಕು.ಆಗ ಮಾತ್ರ ಶಂಕರ್ ಮ್ಯಾಗೇರಿ ಅಂತಹ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ತಾಲ್ಲೂಕಿನ ಅರ್ಜುಣಗಿ ಗ್ರಾಮದ ಶಂಕರ ಮ್ಯಾಗೇರಿ ಎಂಬ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದ ಖೋ ಖೋ ಪಂಚಾಯತ ಯುವ ಕ್ರೀಡಾ ಖೇಲ ಅಭಿಯಾನದಲ್ಲಿ ನಡೆಯುವ ಪಂದ್ಯದಲ್ಲಿ ಆಯ್ಕೆಯಾಗಿದ್ದರು. ಅವರನ್ನು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಸನ್ಮಾನಿಸಿ ಬಿಳ್ಕೊಟ್ಟರು. ಶಂಕರ ಮ್ಯಾಗೇರಿ ಅಂತಹ ಪ್ರತಿಭೆಗಳು ಗ್ರಾಮೀಣ ಪ್ರದೇಶದ ಪ್ರತೀಭೆಗಳಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಶಿವಾನಂದ ಮುರಗುಂಡಿ, ರೇವಣಸಿದ್ದ ಪೂಜಾರಿ, ಚನ್ನಪ್ಪ ಬಿರಾದಾರ, ಸಿದ್ದಾರಾಮ ರೋಡಗಿ, ಮಹೇಶಗೌಡ ಪಾಟೀಲ, ವಿಲಾಸ ಜಾದವ್, ಸಚಿನ್ ಜಾದವ್, ಪ್ರವೀಣ ರಾಠೋಡ, ರಾಹುಲ್ ಕಡೆಮನಿ, ರೋಹಿತ್ ಪವಾರ ಉಪಸ್ಥಿತರಿದ್ದರು.