ಶಿಕ್ಷಣ ಕಾಶಿಯಲ್ಲಿ ಪ್ರೌಢಶಾಲಾ ವಿಧ್ಯಾರ್ಥಿಗಳ ಕ್ರೀಡಾಕೂಟ..!
ಇಂಡಿ : ಭಾರತ ದೇಶವು ವಿಶ್ವದಲ್ಲಿ ವೈಜ್ಞಾನಿಕವಾಗಿ ಮುಂದುವರಿದ ದೇಶವಾಗಿದೆ. ಕ್ರೀಡೆಯಲ್ಲಿಯು ಮುಂದುವರಿಯಬೇಕಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮತ್ತು ಆರೋಗ್ಯದ ಕಡೆ ಅತೀ ಹೆಚ್ಚು ಆಸಕ್ತಿ ವಹಿಸಬೇಕಾಗಿದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ ಎಸ್ ಲಾಳಸೇರಿ ಹೇಳಿದರು.
ತಾಲೂಕಿನ ಶಿಕ್ಷಣ ಕಾಶಿ ಎಂದು ಪ್ರಖ್ಯಾತ ಪಡೆದ ಲಚ್ಯಾಣ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ, ಸಾಕ್ಷರತಾ ಇಲಾಖೆ ಮತ್ತು ಮುರಾರ್ಜಿ ವಸತಿ ಶಾಲೆ ಲಚ್ಯಾಣ ಇವರ ಸಹಯೋಗದಲ್ಲಿ ಪ್ರೌಡಾ ಶಾಲಾ ವಲಯ ಮಟ್ಟದ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರೆವರಿಸಿ ಮಾತಾನಾಡಿದರು. ಕ್ರೀಡೆಯಲ್ಲಿ ಸೂಲು ಮತ್ತು ಗೆಲುವು ಸಾಮಾನ್ಯ ಎರಡನ್ನು ಕ್ರೀಡಾ ಮನೋಭಾವ ದಿಂದ ನೋಡಬೇಕು. ಯುವಜನರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಪಡೆದು ದೇಶದ ಗರಿಮೆಯನ್ನು ಎತ್ತರಕ್ಕೆ ಒಯ್ಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶವಂತಗೌಡ ಬಿರಾದಾರ ವಹಿಸಿ ಶ್ರೀ ಸಿದ್ದಲಿಂಗ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್. ಸಿ ಅಧ್ಯಕ್ಷ ಅರವಿಂದ್ ಕರಾಳೆ, ದೊಡ್ಡಗೌಡಪ್ಪ ಬಿರಾದಾರ, ರಾಜು ನದಾಫ, ಗುರುನಾಥ ಮುಜಗೊಂಡ, ಶಂಕರ ಅವಜಿ, ಮೂರಾಜಿ೯ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ ಸಂಖ, ಎಚ್ ಎಸ್ ಗೊಟ್ಯಾಳ, ಎಲ್ ಆರ್ ನಾಯ್ಕ, ಡಿಜಿ ಬಿರಾದಾರ, ಟಿ.ಎಸ್ ಹೊಸಮನಿ ದಯಾನಂದ ಕೊಳ್ಳಿ, ಹಾಗೂ ಅನೇಕ ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.