ಕ್ರೀಡೆಯಿಂದ ಸದೃಡ ಆರೋಗ್ಯ, ಸ್ವಾಸ್ಥ್ಯ ಸಮಾಜ ನಿರ್ಮಾಣ ; ಎಮ್ ಎಮ್ ಡಪ್ಪಿನ
ಇಂಡಿ : ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು ಗ್ರಾಮೀಣ ಸಿಪಿಐ ಎಮ್ ಎಮ್ ಡಪ್ಪಿನ ಹೇಳಿದರು.
ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ವಿಷ್ಣು ಸೇನಾ ಗಜಾನನ ಯುವಕ ಮಂಡಳಿ ಆಶ್ರಯದಲ್ಲಿ ಜರುಗಿದ ಪ್ರೆಂಡ್ಸ್ ವಾಲಿಬಾಲ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತಾನಾಡಿದರು.
ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ. ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯವಿದೆ. ಕ್ರೀಡೆಯ ಮುಂದಿನ ಹಂತದ ಸ್ಪರ್ಧೆಗಳಿಗೆ ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ರಾಹುಲ್ ಎಸ್ ನಾಯಕ, ಗ್ರಾಮದ ಮುಖಂಡ ಮನೋಜ್ ಗೌಡ್ ಪಾಟೀಲ್, ನಿಂಗಪ್ಪ ತಿಳಗುಳ, ಸೋಮು ಪಟ್ಟಣಶೆಟ್ಟಿ
ಮಿಲಿಂದ ಹೊಸಮನಿ, ಎಸ್ ಡಿ ಎಮ್ ಸಿ ಅಧ್ಯಕ್ಷ
ಪಿರಪ್ಪ ಭಾವಿಕಟ್ಟಿ, ಅರಣ್ಯ ಇಲಾಖೆ ವಿಠ್ಠಲ್ ಬೋರುಟಗಿ ಹಾಗೂ ವಿಷ್ಣು ಸೇನಾ ಸಮತಿಯ ಸದಸ್ಯ ಬಸವರಾಜ್ ಪಟ್ಟಣಶೆಟ್ಟಿ, ರಾಜು ಹುಬ್ಬಳ್ಳಿ , ಅನೀಲ ನಂದ್ಯಾಳ
ಶರಣು ಹತ್ತಿ, ಅನಿಲ್ ರಜಪೂತ್ ಅಬಕಾರಿ ಇಲಾಖೆ
ಸಿದ್ದು ಕುರುಬತಳ್ಳಿ ಹಾಗೂ ಅನೇಕ ಮುಖಂಡರು ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು.