“ಕ್ರೀಡೆ” ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ : ಅಪ್ಪಣ್ಣ ಕಲ್ಲೂರ
ಇಂಡಿ: ಕ್ರೀಡೆಗಳು ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಬೆಳವಣಗೆಗೆ ಸಹಕಾರಿಯಾಗಿದ್ದು, ಕ್ರೀಡೆಗಳು ನಾಯಕತ್ವದ ಗುಣ ಬೆಳೆಸುವುದಲ್ಲದೇ ಆರೋಗ್ಯವಂತ ಶರೀರವನ್ನುಂಟು ಮಾಡುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಅಪ್ಪಣ್ಣ ಕಲ್ಲೂರ ಹೇಳಿದರು.
ತಾಲ್ಲೂಕಿನ ತಾಂಬಾ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ ಹಾಪ್ ಪಿಚ್ ಟೆನಿಸ್‌ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿ ಕ್ರಿಕೆಟ, ಕಬಡ್ಡಿ, ಖೋ ಖೋ, ಇಂತಹದ ಆಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆ ಬಲಗೊಳ್ಳುತ್ತೆ. ಆದ್ದರಿಂದ ಆಸ್ಪತ್ರೆ ಹೋಗುವ ಪ್ರಮೇಯ ಬರುವುದಿಲ್ಲೆಂದು ಹೇಳಿದರು.
ಶ್ರೀ ಸಂಗನಬಸವ ಸೌಹಾದ ಪತ್ತಿನ ಸಹಕಾರಿ ಸಂಸ್ಥೆಯ ನಿರ್ದೇಶಕ ಸಿದ್ದು ಹತ್ತಳ್ಳಿ ಮಾತನಾಡಿ, ಕ್ರೀಡಾ ಕೂಟಗಳು ಸ್ಪರ್ಧಾ ಮನೋಭಾವ ಬೆಳೆಸುತ್ತವಲ್ಲದೆ, ಸಹೋದರ ಭಾವವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯುವಕರು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸದೃಢ ಶರೀರವನ್ನು ಹೊಂದಿ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಹಿಂದಿನ ಪೂರ್ವಜರು ಕುಸ್ತಿಗಳನ್ನು ಆಡುವ ಮೂಲಕ ಅವರು ಆಯಸ್ಸು ಹೆಚ್ಚಾಗಿರುವುದನ್ನು ಸ್ಮರಿಸಿದರು. ಅವರು ಸೇವಿಸಿಸುವ ಆಹಾರ ಪದಾರ್ಥಗಳು ಗುಣಮಟ್ಟದಾಗಿತ್ತು. ಇಂದು ನಾವು ನಮ್ಮ ದೇಶಿಯ ಆಹಾರ ಪದ್ಧತಿಗಳು ಬಿಟ್ಟು ವಿದೇಶಿ ಸಂಸ್ಕೃತಿಯ ಆಹಾರ ಪದ್ಧತಿಗಳು ಜೀವನ ಇರುವಿಕೆಯ ಶೈಲಿ ಬದಲಾವಣೆ ಯಾಗುತ್ತಿರುವದರಿಂದ, ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಬೀರುತ್ತಿವೆ. ಸ್ವದೇಶಿ ವಸ್ತುಗಳು ಬಳಿಸಿ ದೇಶದ ಶ್ರೀಮಂತ ಸಂಸ್ಕೃತಿಯನ್ನು ಯುವ ಸಮುದಾಯ ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಜಾಕ ಚಿಕ್ಕಗಸಿ, ರಾಚ್ಚಪ್ಪ ಗಳೇದ, ಪರಸು ಬಿಸನಾಳ, ರಾಮಚಂದ್ರ ದೊಡ್ಡಮನಿ, ಯೊಗಪ್ಪ ಹೋರಪೇಟಿ, ಮಾಸೀಮ ಚಿಕ್ಕಗಸಿ, ಮಹ್ಮದ ದಡೇದ, ಮುನ್ನ ನಾಗಠಾಣ, ಅನ್ಸರ್ ಮುಲ್ಲಾ, ಆರೀಫ ಮುಲ್ಲಾ, ಅಲ್ಲಾಬಕ್ಷ ದಡೇದ, ಅನೇಕರು ಉಸ್ಥಿತರಿದ್ದರು.
ಪ್ರಥಮ ಬಹುಮಾನ ಬಳಗಾನೂರ ಗ್ರಾಮದ ಎಸ್.ಎಸ್.ಪಟೇಲ ಕ್ರಿಕೆಟ ತಂಡ, ದ್ವಿತೀಯ ಬಹುಮಾನ ತಾಂಬಾ ಗ್ರಾಮದ ಅಂಜುಮನ್ ಇಸ್ಲಾಂ ಕ್ರಿಕೆಟ ತಂಡ, ಬಳ್ಳೋಳ್ಳಿ ಗ್ರಾಮದ ಜೈ ಹನುಮಾನ್ ಕ್ರಿಕೆಟ ತಂಡಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ತಾಂಬಾ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ ಹಾಪ್ ಪಿಚ್ ಟೆನಿಸ್‌ಬಾಲ್ ಕ್ರಿಕೆಟ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಬಳಗಾನೂರ ಗ್ರಾಮದ ಎಸ್.ಎಸ್.ಪಟೇಲ ಕ್ರಿಕೆಟ ತಂಡಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು.