ಐಸಿಸಿ ಏಕದಿನ ವಿಶ್ವಕಪ್ 2023 ಅಫಘಾನಿಸ್ತಾನದ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನ..
Sports Cricket News Afghanistan Beat Pakistan In World Cup 2023
Voice Of Janata Desk News
Afghanistan vs Pakistan: ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 7 ಬಾರಿ ಪಾಕಿಸ್ತಾನ್ ತಂಡ ಜಯ ಸಾಧಿಸಿತ್ತು. ಇದೀಗ 8ನೇ ಬಾರಿಯ ಸೆಣಸಾಟದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಅಫ್ಘಾನ್ ಚೊಚ್ಚಲ ಜಯ ಸಾಧಿಸಿರುವುದು ವಿಶೇಷ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 22ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡಕ್ಕೆ ಆರಂಭಿಕರಾದ ಅಬ್ದುಲ್ಲ ಶಫೀಕ್ (58) ಹಾಗೂ ಇಮಾಮ್ ಉಲ್ ಹಕ್ (17) ಆರಂಭ ಒದಗಿಸಿದ್ದರು. ಆದರೆ ಅಫ್ಘಾನಿಸ್ತಾನದ ಮಾರಕ ಸ್ಪಿನ ಬೌಲಿಂಗ್ ಮುಂದೆ, ನಿಗದಿತ 50 ಓವರ್‌ಗಳಲ್ಲಿ ಪಾಕಿಸ್ತಾನ್ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 282 ಕ್ಕೆ ಬಂದು ನಿಂತಿತು.
ಅದರೆ ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನದ ತಂಡದ ಆಟಗಾರರು ದಿಟ್ಟತನದಿಂದ ಕೆಚ್ಚೆದಯ ಆಟವಾಡಿ, ಅಂತಿಮವಾಗಿ ಅಫ್ಘಾನಿಸ್ತಾನ್ ತಂಡವು 49 ಓವರ್‌ಗಳಲ್ಲಿ 286 ರನ್ ಬಾರಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದು ಪಾಕಿಸ್ತಾನ್ ವಿರುದ್ಧದ ಅಫ್ಘಾನಿಸ್ತಾನ್ ತಂಡದ ಮೊದಲ ಗೆಲುವು ಎಂಬುದು ವಿಶೇಷ.
ಪಾಕಿಸ್ತಾನ vs ಅಫಘಾನಿಸ್ತಾನ ಪಂದ್ಯದ ಸ್ಕೋರ್
ಪಾಕಿಸ್ತಾನ: 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 282 ರನ್ (ಅಬ್ದುಲ್ಲಾ ಶಫೀಕಿ 58, ಬಾಬರ್ ಆಝಮ್ 74, ಸೌದ್ ಶಕೀಲ್ 25, ಶದಾಬ್ ಖಾನ್ 40, ಇಫ್ತಿಖಾರ್ ಅಹ್ಮದ್ 40; ನವೀನ್ ಉಲ್ ಹಕ್ 52ಕ್ಕೆ 2, ನೂರ್ ಅಹ್ಮದ್ 49ಕ್ಕೆ 3).
ಅಫಘಾನಿಸ್ತಾನ: 49 ಓವರ್‌ಗಳಲ್ಲಿ 2 ವಿಕೆಟ್‌ಗೆ 286 ರನ್ (ರೆಹಮಾನುಲ್ಲಾ ಗುರ್ಬಝ್ 65, ಇಬ್ರಾಹಿಮ್ ಝದ್ರಾನ್ 87, ರೆಹಮತ್ ಶಾ 77*, ಹಶ್ಮತ್‌ಉಲ್ಲಾ ಶಾಹಿದಿ 48*; ಶಾಹೀನ್ ಶಾ ಅಫ್ರಿದಿ 58ಕ್ಕೆ 1, ಹಸನ್ ಅಲಿ 44ಕ್ಕೆ 1).