ಇಂಡಿ : ನಮ್ಮ ದೈಹಿಕ ಮಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ಕ್ಷೇತ್ರ ಸಮಯನ್ವಾಧಿಕಾರಿ ಎಸ್ ಆರ್ ನಡಗಡ್ಡಿ ಶನಿವಾರ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ
ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಾಧಿಕಾರಿಗಳ ಕಾರ್ಯಾಲಯ ಹಾಗೂ ಮಾತೋಶ್ರೀ ಶಾಂತಾಬಾಯಿ ಎಮ್ ಖೇಡ ಪ್ರೌಢ ಶಾಲೆ ಗಣೇಶ ವಸತಿ, ಇವರ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ತಡವಲಗಾ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಪ್ರತಿಭೆ ಭವಿಷ್ಯದ ಜ್ಞಾನ ಸಂಪತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ಮಕ್ಕಳು ಹೆಚ್ಚಿನ ಆಸಕ್ತಿ ಹೊಂದಿರುವುದರಿಂದ ಮಾನಸಿಕ, ದೈಹಿಕವಾಗಿ ಸಂಕುಚಿತವಾಗುತ್ತಿದ್ದು, ಮೊಬೈಲ್ ಗೀಳಿನಿಂದ ಹೊರಬರಬೇಕಾಗಿದೆ.
ಅನೇಕ ಮಕ್ಕಳು ಟಿ.ವಿ ಮತ್ತು ಮೊಬೈಲ್‌ಗೆ ಅಂಟಿಕೊಂಡು, ನಾಲ್ಕು ಗೋಡೆಗಳ ನಡುವೆ ಸ್ವಯಂನಿರ್ಬಂಧಕ್ಕೆ ಒಳಗಾಗಿರುವುದರಿಂದ ಅವರ ಸಾಮಾಜಿಕ ಸಂಪರ್ಕಗಳಿಗೆ, ಅನುಭವಗಳಿಗೆ, ಕಲಿಕೆಗಳಿಗೆ ಪೆಟ್ಟು ಬೀಳುತ್ತಿದೆ. ಬಹುತೇಕ ಮಕ್ಕಳಿಗೆ ಮೊಬೈಲ್ ಎನ್ನುವುದು ಒಂದು ಗೀಳಾಗಿ ಪರಿವರ್ತನೆ ಆಗಿದ್ದು, ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಇನ್ನೂ ಮಾತೋಶ್ರೀ ಪ್ರೌಢಶಾಲೆಯ ಮುಖ್ಯ ಗುರು ಎಮ್ ಆರ್ ರೂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಲ್ಲಾಭಕ್ಷ ಚೌಧರಿ, ಆನಂದಪ್ಪ ಹುಣಸಗಿ, ಎಚ್.ಎಂ.ಬಿಳವಾರ, ಸಂಗಮೇಶ ಹಚಡದ,
ಎಚ್ ಕೆ ಮಾಳಗೊಂಡ, ಪ್ರಕಾಶ ಐರೋಡಗಿ,
ತುಕಾರಾಂ ಹೊಸಮನಿ. ಶಂಕರ ಚವ್ಹಾಣ, ಪಿ ಜಿ ಬಾಗೇವಾಡಿ ಶಂಕರ ಜಮಾದಾರ ದಶರಥ ಕೋರಿ ಸ್ವಾಗತಿಸಿ ನಿರೂಪಿಸಿದರು.