ವಿಶೇಷಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ಬರುವಂತೆ ಉತ್ತೇಜನ ನೀಡಬೇಕು : ಶಾಸಕ ಪಾಟೀಲ್
ಇಂಡಿ: ವಿಶೇಷಚೇತನ ಮಕ್ಕಳು ದೈವಿಪ್ರೀಯ
ಮಕ್ಕಳಾಗಿದ್ದಾರೆ. ಪಾಲಕರು ವಿಶೇಷ ಚೇತನ
ಮಕ್ಕಳನ್ನು ಕಾಳಜಿಯಿಂದ ಕಾಣಬೇಕು. ಸರಕಾರ ನೀಡಿದ
ಸಾಧನೆ ಸಲಕರಣೆಗಳನ್ನು ವಿಕಲಚೇತನ ಮಕ್ಕಳು
ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ
ಯಶವಂತ್ರಾಯಗೌಡ ಪಾಟೀಲ ಮನವಿ ಮಾಡಿದರು.
ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ 2023-24 ನೇ ಸಾಲಿ ನ ವಿಕಲಚೇತನ ಮಕ್ಕಳ ಸಾಧನ ಸಲಕರಣೆಗಳ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಮತ್ತಷ್ಟು ಉತ್ತೇಜನ ನೀಡಿ ಈ ಮಕ್ಕಳು ಮುಖ್ಯವಾಹಿನಿ ಬರುವಂತೆ ಮಾಡಬೇಕು. ಸರ್ಕಾರದ ವ್ಯವಸ್ಥೆ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಹಯೋಗದಿಂದ ಸಲಕರಣೆಗಳ
ಸದುಪಯೋಗ ಪಡೆದುಕೊಳ್ಳಬೇಕೆಂದರು.
ಬಿಇಓ ಟಿ.ಎಸ್ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಆರ್. ನಡಗಡ್ಡಿ, ವಿಕಲಚೇತನರ ಜಿಲ್ಲಾ ನೋಡೆಲ್ ಅಧಿಕಾರಿ ಸಂಭಾಜಿ, ಮಾತನಾಡಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವೀದ್ ಮೋಮಿನ್, ಯಮನಾಜಿ ಸಾಳುಂಕೆ, ವಿಠ್ಠಲಗೌಡ ಬಿರಾದಾರ, ಆಯ್.ಜಿ. ಆಳೂರ, ಬಿ.ಐ. ಗೊರನಾಳ ನಿರೂಪಿಸಿ, ವಂದಿಸಿದರು.
ಇಂಡಿ: ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ 2023-24 ನೇ ಸಾಲಿನ ವಿಕಲಚೇತನ ಮಕ್ಕಳ ಸಾಧನ ಸಲಕರಣೆಗಳ ವಿತರಣಾ ಸಮಾರಂಭದ ಉದ್ಘಾಟನೆಯನ್ನು ಶಾಸಕ ಯತಶವಂತ್ರಾಯಗೌಡ ಪಾಟೀಲ ನೆರವೇರಿಸಿದರು.
ಇಂಡಿ: ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ 2023-24 ನೇ ಸಾಲಿನ ವಿಕಲಚೇತನ ಮಕ್ಕಳ ಸಾಧನ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ವಿಕಲ ಚೇತನ ಮಕ್ಕಳಿಗೆ ಶಾಸಕ ಯತಶವಂತ್ರಾಯಗೌಡ ಪಾಟೀಲ ಸಾಧನಾ
ಸಲಕರಣೆ ವಿತರಿಸಿದರು.