30 ರಂದು ಸ್ಪಂದನಾ ಆಸ್ಪತ್ರೆ ಪ್ರಾರಂಭ
ಇಂಡಿ : ಪಟ್ಟಣದ ಸ್ಟೇಷನದ ರಸ್ತೆಯಲ್ಲಿರುವ ಸ್ಪಂದನಾ ಆಸ್ಪತ್ರೆಯು ಜು. ೩೦ ರಂದು ಪ್ರಾರಂಭವಾಗುವದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಜಗದೀಶ ಕ್ಷತ್ರಿ ತಿಳಿಸಿದ್ಧಾರೆ.
ದಿವ್ಯ ಸಾನಿದ್ಯ ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು ,ಅಲಮೇಲದ ಚಂದ್ರಶೇಖರ ಶಿವಾಚಾರ್ಯರರು, ತಡವಲಗಾದ ರಾಚೋಟೇಶ್ವರ ಶ್ರೀಗಳು , ಬಾಲಗಾಂವ ಕಾತರಾಳದ ಅಮೃತಾನಂದ ಶ್ರೀಗಳು , ಗೊಳಸಾರದ ಅಭಿನವ ಪುಂಢಲಿಂಗ , ಶಿವಯೋಗಿಗಳು ಆಳೂರದ ಶಂಕರಾನಂದ ಶ್ರೀಗಳು ಹಳೀಬಾಲಗಾಂವದ ಮಲಕಯ್ಯ ಹಿರೇಮೇಠ ಶ್ರೀಗಳು ಭಾಗವಹಿಸುವರು. ಇಂಡಿಯ ಶಾಸಕ ಯಶವಂತರಾಯ ಗೌಡ ಪಾಟೀಲರು ಅಧ್ಯಕ್ಷತೆ ವಹಿಸುವರು ಎಂದು ಜಗದೀಶ ಕ್ಷತ್ರಿ ತಿಳಿಸಿದ್ದಾರೆ.
ಮ್ಯಾನೆಜಿಂಗ ಡೈರೆಕ್ಟರ ಡಾ||ಲಕ್ಮೀಕಾಂತ್ ಮೇತ್ರಿ ಸ್ಪಂದನಾ ಆರೋಗ್ಯ ಕಾರ್ಡು ಕುರಿತು ಮಾತನಾಡಿ ರೂ ೪೯೯ ಒಮ್ಮೆ ಕಟ್ಟಿದರೆ ಒಂದು ವರ್ಷಗಳ ವರೆಗೆ ಅದೇ ಕಾರ್ಡು ತಪಾಸಣೆ ಮಾಡಿಕೊಳ್ಳಬಹುದು. ಪ್ರತಿ ಬಾರಿ ತಪಾಸಣೆಗೆ ಹಣ ಕಟ್ಟುವ ಅವಶ್ಯಕತೆ ಇಲ್ಲ ಎಂದರು.
ಇಂಡಿಯಿಂದ ಬರುವವರಿಗೆ ಉಚಿತ ಬಸ್ ವ್ಯವಸ್ಥೆ ಮತ್ತು ೧೦ ಕಿ.ಮಿ ದೂರದ ವರೆಗೆ ಉಚಿತ ಅಂಬ್ಯುಲನ್ಸ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಲ್ಲ ವಿಭಾಗದ ವೈದ್ಯಕೀಯ ತಜ್ಞರಿದ್ದು ಅವರು ಯಾವಾಗ ದೊರೆಯುತ್ತಾರೆ ಎಂಬುದನ್ನು ಕಾರ್ಡು ಪಡೆದವರಿಗೆ ತಿಳಿಸಲಾಗುವದು ಎಂದರು.
ಅದಲ್ಲದೆ ಕಾರ್ಡು ಹೊಂದಿದವರಿಗೆ ಔಷದ, ಒಳರೋಗ ವಿಭಾಗ,ಸ್ಕಾನಿಂಗ್, ಸಿಟಿ ಸ್ಕಾನಿಂಗ್ ದಲ್ಲಿ ೨೦% ರಿಯಾಯತಿ ನೀಡಲಾಗುವದು ಎಂದರು. ಆಸ್ಪತ್ರೆ ೨೪*೭ ಸೇವೆ ಒದಗಿಸುತ್ತದೆ ಎಂದರು.
ಆಸ್ಪತ್ರೆಯ ನೋಟ




















