ವಿಜಯಪುರ : ಹೊಸ ವರ್ಷಾಚರಣೆ ವೇಳೆ ಕ್ರೈಂನಲ್ಲಿ ಕೈ ಹಾಕಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೌಡಿಶೀಟರ್, ಪುಂಡರಿಗೆ ಎಸ್ಪಿ ಎಚ್ಡಿ ಆನಂದಕುಮಾರ ಎಚ್ಚರಿಕೆ ನೀಡಿದರು.
ವಿಜಯಪುರ ನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷವನ್ನು ಸಂಭ್ರಮದಿಂದ ಸಂಭ್ರಮಾಚರಣೆ ಮಾಡಬೇಕು. ಅದನ್ನು ಬಿಟ್ಟು ಮದ್ಯದ ಅಮಲಿನಲ್ಲಿ ಕ್ರೈಂನಲ್ಲಿ ಭಾಗವಹಿಸಿದ್ರೆ ಜಿಲ್ಲಾ ಪೊಲೀಸ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಅಲ್ಲದೇ, ರೆಸ್ಟೋರೆಂಟ್, ಬಾರ್ ಸೇರಿದಂತೆ ವಿವಿಧ ಕಡೆಗೆ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಸರ್ಕಾರದ ಗೈಡ್ ಲೈನ್ಸ್ನಂತೆ ಸಮಯಕ್ಕೆ ಸರಿಯಾಗಿ ಸಂಭ್ರಮಾಚರಣೆ ಮುಗಿಸಬೇಕು ಎಂದರು.