ಸಮಾಜ ಸೇವಕಿ ಸಂಗೀತಾ ನಾಡಗೌಡ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆ.
ವರದಿ: ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಸಮಾಜ ಸೇವಕರು,ಕಾಂಗ್ರೆಸ್ ಪಕ್ಷದ ಹಿರಿಯ ಮಹಿಳಾ ಮುಖಂಡರು , ಕೆಪಿಸಿಸಿಯ ಐ.ಎನ್.ಬಿ.ಸಿ.ಡಬ್ಲ್ಯೂ ಎಪ್ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಸಂಗೀತಾ ನೀಲಕಂಠರಾವ ನಾಡಗೌಡ ಅವರಿಗೆ ರಾಷ್ಟ್ರಮಟ್ಟದ ಬಸವ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶನಿವಾರ ಜ ೧೦ ರಂದು ಐ.ಎಂ.ಐ ಹಾಲಿ ಲಿಂಗಸೂಗೂರಿನಲ್ಲಿ ನಡೆಯುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ.ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಚಿಂತನೆಗಳ ಸಂಗ್ರಹ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಸಂಗೀತ ನೀಲಕಂಠರಾವ ನಾಡಗೌಡ ಅವರಿಗೆ ಅವರ ಸಮಾಜಮುಖಿ ಸೇವೆ ಗುರ್ತಿಸಿ ರಾಷ್ಟ್ರಮಟ್ಟದ ಬಸವಶ್ರೀ ಪ್ರಶಸ್ತಿ ಪ್ರಧಾನ ನಡೆಯಲಿದೆ. ಎಂದು ಉಮಾದೇವಿ ಹಿರೇಮಠ ಸಂಸ್ಥಾಪಕ ಸ್ವಾಮಿ ಚಾರಿಟೇಬಲ್ ಟ್ರಸ್ಟ್,ಅಮರಯ್ಯಸ್ವಾಮಿ ಹರೇಟನೂರ ಅಧ್ಯಕ್ಷ ಕಾರುಣ್ಯ ನೆಲೆ ವೃದ್ಧಾಶ್ರಮ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















