ಮುದ್ದೇಬಿಹಾಳ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಎರಡು ತಿಂಗಳ ಹಿಂದೆ ಪರಿಶೀಲನೆ ಮಾಡಲಾಗಿತ್ತು ವಿವಿಧ ಇಲಾಖೆ ಕೆಲಸ ಗಳ ಯೋಜನೆ ವಲಯ ಅರಣ್ಯ ಇಲಾಖೆ,ಕೃಷಿ ಇಲಾಖೆ,ಸಾಮಾಜಿಕ ಅರಣ್ಯ ಇಲಾಖೆ ಉದ್ಯೋಗ ಖಾತ್ರಿ ಯೋಜನೆಯ 15 ನೇ ಹಣಕಾಸು ಯೋಜನೆ, ಗ್ರಾಪಂ ಯೋಜನೆಗಳು ವಿವಿಧ ಗ್ರಾಮಗಳಿಗೆ ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದೇವೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮದ ವ್ಯವಸ್ಥಾಪಕ ಚಿದಾನಂದ ಕೋಲಾರಿ ಹೇಳಿದರು.
ತಾಲೂಕಿನ ಅಡವಿ ಸೋಮನಾಳ ಗ್ರಾಪಂಯಲ್ಲಿ ಮಂಗಳವಾರ 2024/25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು 15 ನೇ ಹಣಕಾಸಿನ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆ ಗ್ರಾಮಸಭೆಯಲ್ಲಿ
ಅವರು ಮಾತನಾಡಿದ, ಕಾಮಗಾರಿ ಕೆಲಸ ಬಗ್ಗೆ ಆಕ್ಷೇಪಣೆ ಇದ್ದರೆ ನಮಗೆ ಮಾಹಿತಿ ನೀಡಿ ಇದರ ಬಗ್ಗೆ ಪರಿಶೀಲನೆಯನ್ನು ಮಾಡಲಾಗುವುದು. ಎಲ್ಲಾ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಇದ್ದರೆ ನಮಗೆ ಲಿಖಿತ ರೂಪದಲ್ಲಿ ನೀಡದಿದ್ದರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತಪ್ಪು ಕೊಂಡು ಬಂದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ
ಅಡವಿ ಹುಲಗಬಾಳ ಗ್ರಾಮದ ಶಾಲೆಯಲ್ಲಿ ನಿರ್ಮಾಣವಾದ ಶೌಚಾಲಯ ಗಾಳಿ ಬೆಳಕು ಇಲ್ಲದೆ ಈ ಕಾಮಗಾರಿ ಅವೈಜ್ಞಾನಿಕ ವಾಗಿದೆ ಗುತ್ತಿಗೆದಾರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ತಿಳಿಸಿದರು.
ಈ ಸಭೆಯ ಕುರಿತು ಅಕ್ಷರ ದಾಸೋಹ ಸಹಾಯಕ ಹಾಗೂ ಅಡವಿ ಸೋಮನಾಳ ಗ್ರಾಪಂ ನೋಡಲ್ ಅಧಿಕಾರಿ ನಿರ್ದೇಶಕ ಎಂ ಎಂ ಬೆಲಗಲ್ಲ ಸಭೆಯಲ್ಲಿ ಮಾತನಾಡಿದ ಕಳೆದ ವರ್ಷದ ನಡೆದ ಕಾಮಗಾರಿ ಕೆಲಸ ಮಾಡಿಲ್ಲ ಇಲ್ಲದೆ ಬಗ್ಗೆ ಸಾರ್ವಜನಿಕ ಪ್ರಶ್ನೆ ಮಾಡಬಹುದು, ವಿವಿಧ ಗ್ರಾಮಗಳಲ್ಲಿ ಕಾಮಗಾರಿ ಕೆಲಸದ ಬಗ್ಗೆ ಸರಿಯಾಗಿದೆ ಇಲ್ಲ ಇದರ ಬಗ್ಗೆ ನಮಗೆ ಮಾಹಿತಿ ನೀಡಬೇಕು ಗ್ರಾಮದಲ್ಲಿ ಒಳ್ಳೆಯ ಕೆಲಸ ಆದರೆ ಗ್ರಾಮಸ್ಥರು ಸಹಕಾರ ನೀಡಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ಶಿಕ್ಷಣ ಆರೋಗ್ಯ ಸ್ವಚ್ಚ ಬಗ್ಗೆ ಗ್ರಾಪಂ ಅಡಳಿತ ಮಂಡಳಿ ಸದಸ್ಯರು ಒತ್ತು ನೀಡಿದ್ದರೆ ಗ್ರಾಮಗಳ ಅಭಿವೃದ್ಧಿ ಹೊಂದುತ್ತವೆ.
ಅಡವಿ ಸೋಮನಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯ, ಅಂಗನವಾಡಿ ಕೇಂದ್ರದಲ್ಲಿ ಹೈಟೆಕ್ ಶೌಚಾಲಯ, ಶಾಲೆಯಲ್ಲಿ ಕಿಚನ್, ಗಾರ್ಡನ್ ಕಿಚನ್, ಕೃಷಿ ಹೊಂಡ,ಬದು ನಿರ್ಮಾಣ, ಪ್ರಾಮಾಣಿಕವಾಗಿ ಕೆಲಸ ಇರಬೇಕು ಈ ಕೆಲಸವು ಐದು ವರ್ಷದವರೆಗೆ ಕೆಲಸ ಉಳಿದರೆ ಸರಕಾರ ಕೊಟ್ಟು ಅನುದಾನ ಸದ್ದಬಳಕೆಯಾಗುತ್ತೆದೆ ಎಂದರು.
ಇದೇ ವೇಳೆ ಗ್ರಾಮಸಭಯಲ್ಲಿ ಸವಿತಾ ಪಾಟೀಲ್ ಕಾಮಗಾರಿ ವರದಿ ಮಂಡನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಸಂಗಮ್ಮ ಭರಮಣ್ಣ ಹಂಚಿನಾಳ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿರ್ಮಾಲಾ ಬಿ ತೋಟದ,ಕಾರ್ಯದರ್ಶಿ ಗುರಡ್ಡಿ ಬಿರಾದಾರ,ಗ್ರಾಪಂ ಸದಸ್ಯರಾದ ಮಾಳಮ್ಮ ಮನಗೂಳಿ, ತಿಪ್ಪಮ್ಮ ವಡ್ಡರ,ಮುತ್ರಣ್ಣ ಬಿರಾದಾರ, ಆಂಜನೇಯ ಪವಾರ, ಯಮನಪ್ಪ ಚಲವಾದಿ,ಹಣಂಂತ್ರಾಯ ಪಾಟೀಲ ,ಮಲ್ಲಿಕಾರ್ಜುನ ಕೂಡಲಗಿ, ಮೌನೇಶ ಕುಡಲಗಿ,ವಿರೇಶ ಚಲವಾದಿ,ಬಾಪುಗೌಡ ಪಾಟೀಲ, ಅಂಗನವಾಡಿ ಕಾರ್ಯಕರ್ತರಾದ ಸುನಂದಾ ಸೇಲಾರ,ಬಸಮ್ಮ ಕಡಿ,ಅಂಜನಾದೇವಿ ಬಡಿಗೇರ, ಎನ್ ಅರ್ ಎಲ್ಎಂ ಸಿಬ್ಬಂದಿಗಳು ಗ್ರಾಪಂ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.