ತಾಲೂಕು ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಹೊಸಮನಿ ಅಕ್ರೋಷ..! ಕಾರಣ ಗೊತ್ತಾ..?
ಇಂಡಿ : ಅಕ್ಟೋಬರ್ 2 ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಲಾಲಬಹದ್ದೂರ ಶಾಸ್ತ್ರೀಜೀ ಜಯಂತಿ ಹಿನ್ನೆಲೆಯಲ್ಲಿ ಕರೆದ ಪೂರ್ವಭಾವಿ ಸಭೆಗೆ ಅನೇಕ ತಾಲೂಕು ಅಧಿಕಾರಿಗಳು ಗೈರು ಹಾಜರಿಯಾದ ಹಿನ್ನೆಲೆಯಲ್ಲಿ ಮತ್ತು ನಿಗದಿತ ಸಮಯಕ್ಕೆ ಸಭೆ ಪ್ರಾರಂಭವಾಗದ ಕಾರಣ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೊಸಮನಿ ಅಧಿಕಾರಿಗಳ ವಿರುದ್ಧ ಅಕ್ರೋಷ ವ್ಯಕ್ತಪಡಿಸಿದರು.
ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿಜೀ ಹಾಗೂ ಲಾಲಬಹದ್ದೂರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ಗ್ರೇಡ್ 2 ತಹಶಿಲ್ದಾರ ಧನಪಾಲಶೆಟ್ಟಿ ದೇವೂರ ವಹಿಸಿದ್ದರು. ಜಯಂತಿ ಆಚರಣೆ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ , ಸಂಘ-ಸಂಸ್ಥೆಗಳ ಹಾಗೂ ನಗರದ ಮುಖಂಡರನ್ನು ಪೂರ್ವಭಾವಿ ಸಭೆಯ ಅಹ್ವಾನಿಸಲಾಗಿತ್ತು. ಆದರೆ ತಾಲೂಕು ಮಟ್ಟದ ಅಧಿಕಾರಿಗಳು, ಗೈರು ಹಾಜರಾಗಿದ್ದು, ಅದಲ್ಲದೇ ಸಂಭಂದಿಸಿದ ಇಲಾಖೆಯ ಪ್ರತಿನಿಧಿಗಳು ಸಹ ಬರದೆ ಇದ್ದುದರಿಂದ ಸಭೆ ಆಕ್ರೋಶ ಕಾರಣವಾಯಿತು.
ಇನ್ನೂ ಈ ಸಂದರ್ಭದಲ್ಲಿ ಶಿರಸ್ತೆದಾರ ಬಿ.ಎ. ರಾವೂರ, ಈ ಹಿಂದಿನ ವರ್ಷದ ಆಚರಣೆ ಬಗ್ಗೆ ಇರುವ ನಡಾವಳಿಗಳ ವರದಿಯನ್ನು ಓದಿದರು. ಅದರಂತೆ ಸರಳ ಮತ್ತು ಅರ್ಥಪೂರ್ಣ ಜಯಂತಿ ಆಚರಣೆ ಮಾಡಲು ಸಭೆಯ ಅಧ್ಯಕ್ಷತೆ ವಹಿಸಿರುವ ಗ್ರೇಡ್ 2 ತಹಶಿಲ್ದಾರ ಧನಪಾಲಶೆಟ್ಟಿ ದೇವೂರ ಸೂಚಿಸಿದರು.
ಗಾಂಧಿ ಜಯಂತಿ ಪ್ರಯುಕ್ತ ತಾಲ್ಲೂಕಿನಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ನಿರ್ಬಂಧಿಸಿ ಕ್ರಮವಹಿಸುವುದಾಗಿ ಹಾಗೂ ಸೂಕ್ತ ಸುರಕ್ಷತೆ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು, ಎಲ್ಲಾ ಶಾಲಾ, ಕಚೇರಿಗಳಲ್ಲಿ ಆಚರಣೆ ಮಾಡುವಂತೆಯೂ ಸೂಚಿಸಲಾಯಿತು. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಬೇಕು ಎಂದು ನಿರ್ದೇಶನ ನೀಡಿದರು. ಅದಲ್ಲದೇ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು. ಮುಂದೆ ಇಂತಹ ಅಶಿಸ್ತು ಕಂಡಾಗ ಶಿಸ್ತು ಕ್ರಮ ಜರಗಿಸಬೇಕಾಗುತ್ತೆದೆ. ನಗರದ ಪ್ರಮುಖ ವೃತ್ ಗಳು ಹಾಗೂ ಪ್ರಮುಖ ರಸ್ತೆಗಳನ್ನು ಸ್ವಚ್ಚೆತೆಗೊಳಿಸಿ ಅಲಂಕಾರಗೊಳಿಸಬೇಕೆಂದು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನಕ್ಷರಸ್ಥರಲ್ಲ..! ಸ್ಪರ್ಧಾತ್ಮಕ ಯುಗದಲ್ಲಿ ಓದಿ, ಬರೆದು ತಾಲೂಕು ಅಧಿಕಾರಿಗಳಾಗಿ ಕಾರ್ಯಾಂಗ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವ ಮತ್ತು ಸಮಾಜದ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನ ಕಂಡರೆ ಅತ್ಯಂತ ಹೆಮ್ಮ. ಆದರೆ ನಮ್ಮ ತಾಲ್ಲೂಕಿನಲ್ಲಿ ಅದು ಬೇಜಾರು ಮತ್ತೆ ನೋವಾಗುವ ಅಪಾಯಕಾರಿ ವಿಷಯವಾಗಿದೆ. ಅನೇಕ ಬಾರಿ ಶರಣರ ಸಂತರ ಜಯಂತಿ ಪೂರ್ವ ಸಭೆ ಹಾಗೂ ಆಚರಣೆಯಲ್ಲಿಯೂ ತಾಲೂಕು ಅಧಿಕಾರಿಗಳು ಗೈರು ಹಾಜರಾಗುತ್ತಾರೆ. ಆದರೆ ಕೆಲವೊಂದು ಬಾರಿ ಅನಿವಾರ್ಯ ಎಂದು ಭಾವಿಸೋಣ. ಆದರೆ ದೇಶದ ಸ್ವತಂತ್ರ್ಯಯಲ್ಲಿ ಅತ್ಯಂತ ಮಹತ್ವ ಪೂರ್ಣವಾಗಿರುವ ರಾಷ್ಟ್ರಪಿತ ಜಯಂತಿ ಪೂರ್ವ ಸಭೆಯಲ್ಲೂ ಬಾಗವಹಿಸುವುದಿಲ್ಲ ಎಂದರೆ ಏನರ್ಥ..! ಅದಕ್ಕಾಗಿ ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿಕೊಂಡರು.
ಚಂದ್ರಶೇಖರ ಹೊಸಮನಿ,
ಇಂಡಿ ನಿವಾಸಿ, ಸಾಮಾಜಿಕ ಕಾರ್ಯಕರ್ತ