ಮುದ್ದೇಬಿಹಾಳ:ಇತ್ತೀಚೆಗೆ ಜಿಲ್ಲಾ ಸಾಹಿತ್ಯ ಪರಿಷತ್ತು ವತಿಯಿಂದ 70ನೇ ಕನ್ನಡ ರಾಜೋತ್ಸವದ ಅಂಗವಾಗಿ ಸಂಕೀರ್ಣ (ಶಿಕ್ಷಣ, ಸಾಹಿತ್ಯ ಸಂಘಟನೆ) ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ಜಿಲ್ಲಾ ರಾಜೋತ್ಸವ ಪ್ರಶಸ್ತಿಯನ್ನು ವಿಜಯಪುರದ ಗಾಂಧೀಭವನದಲ್ಲಿ ನಡೆದ ಸಮಾರಂಭದಲ್ಲಿ ಎಂ.ನೆರಬೆಂಚಿ ರವರಿಗೆ ಪ್ರಶಸ್ತಿ ಪ್ರದಾನ ನೀಡಲಾಯಿತು.
ಇವರು 3 ವರ್ಷಗಳ ಕಾಲ ಎಲೆಕ್ಟ್ರಿಕಲ್ ಎಂಜನಿಯರಾಗಿ ಪುಣೆ, ಬೆಂಗಳೂರನಲ್ಲಿ ಮೊದಲು ಕೆಲಸ ಮಾಡಿದರು. ತದ ನಂತರ ಸಿವಿಲ್ ಗುತ್ತಿಗೆದಾರನಾಗಿ 3 ವರ್ಷ ಸೇವೆ ಸಲ್ಲಿಸಿದ್ದಾರೆ. 23 ವರ್ಷದ ಹಿಂದೆ ತಾಲೂಕಿನ ಬಳಬಟ್ಟಿಯ ಗ್ರಾಮದಲ್ಲಿ ಇವರು ನಿರ್ಮಿಸಿದ ಸರ್ಕಾರಿ ಪ್ರೌಢಶಾಲೆ ಇಂದಿಗೂ ಗಟ್ಟಿಮುಟ್ಟಾಗಿದೆ. ಇದು ಇವರ ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ. ಪಟ್ಟಣದ ವಿದ್ಯಾರ್ಥಿಗಳು ದೂರದ ಪರಸ್ಥಳಗಳಿಗೆ ಹೋಗಿ ಐಟಿಐ ಕಲಿಯುವ ಪರಿಸ್ಥಿತಿ ಇತ್ತು. ಇವರು 2002ರಲ್ಲಿ ಬಿಬಿಆರ್‌ಐಟಿಐ ಸಂಸ್ಥೆ ಸ್ಥಾಪಿಸಿ ಸ್ಥಳೀಯ ವಿದ್ಯಾರ್ಥಿಗಳ ಅಲೆದಾಟವನ್ನು ತಪ್ಪಿಸಿದರು. ಇವರು ಜನರಲ್ಲಿ ಜಾಗೃತಿ ಮೂಡಿಸುವಂಥ ಕೆಲವು ಕಥೆ, ಕವನ, ಲೇಖನಗಳನ್ನೂ ಬರೆದಿದ್ದಾರೆ ಎಂದು ಹೇಳಿದರು.