ನ-1ಕ್ಕೆ ಶಿವಕುಮಾರ್ ಸಕ್ಕರೆ ಕಾರ್ಖಾನೆ ಪ್ರಾರಂಭ : ಸಚಿವ ಎಸ್ ಎಸ್ ಮಲ್ಲಿಕಾರ್ಜುನ
ಇಂಡಿ: ತಾಲೂಕಿನ ಹಿರೇಬೇವನೂರ ಸಕ್ಕರೆ ಕಾರ್ಖಾನೆಯಿಂದ ಪ್ರತಿದಿನ ನಾಲ್ಕು ಸಾವಿರ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ತೋಟಗಾರಿಗೆ ಗಣ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇಬೇವನೂರ ಗ್ರಾಮದ ಶಿವಕುಮಾರ ಸಕ್ಕರೆ ಕಾರ್ಖಾನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ನವೆಂಬರ್ ೧ ಕ್ಕೆ ಕಬ್ಬು ನುರಿಸುವ ಕಾರ್ಯ ಕ್ಕೆ ಚಾಲನೆ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿಕುಮಾರ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮತ್ತು ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಇವರನ್ನು ಅಹ್ವಾನಿಸಲಾಗುತ್ತಿದೆ. ಅದಲ್ಲದೆ ರೈತರಿಗೆ ಕಬ್ಬು ಕಾರ್ಖಾನೆ ಕಳುಹಿಸಿದ ಒಂದು ವಾರ ಅಥವಾ ಹದಿನೈದು ದಿನದಲ್ಲಿ ಹಣ ಪಾವತಿಸಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ದಿನ ಎಂಟು ಸಾವಿರ ಟನ್ ಜೊತೆಗೆ ಈಥೆನಾಲ ಮತ್ತು ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು. ಈಗಾಗಲೇ ಕಬ್ಬು ತರಲು ವಾಹನ ಮತ್ತು ಎತ್ತಿನ ಗಾಡಿಯ ಕುರಿತು ಸಂಗ್ರಹ ಕರ‍್ಯ ನಡೆದಿದೆ. ಕಬ್ಬು ಕಡಿಯುವ ಟೋಳಿಗಳು ಬಂದು ಭೇಟಿ ನೀಡಿತ್ತಿದ್ದು, ಪ್ರತಿ ಗ್ರಾಮದಿಂದ ಎರಡರಿಂದ ಮೂರು ಟೋಳಿ ಮಾಡಲಾಗುತ್ತಿದೆ ಎಂದರು.
ಕಾರ್ಖಾನೆ ಕಬ್ಬಿನ ದರ ನಿಗದಿ ಪಡಿಸಲಾಗುತ್ತಿದ್ದು, ಒಳ್ಳೆಯ ಪೈಪೋಟಿ ದರ ನೀಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಎಸ್. ಪಾಟೀಲ, ಭೀಮರಾಯಗೌಡ ಪಾಟೀಲ ಹಿರೇಬೇವನೂರ ಮತ್ತಿತರಿದ್ದರು.
ಇಂಡಿ: ತಾಲೂಕಿನ ಹಿರೇಬೇವನೂರ ಸಕ್ಕರೆ ಕಾರ್ಖಾನೆ ಸಚಿವ ಮಲ್ಲಿಕಾರ್ಜುನ ವೀಕ್ಷಿಸುತ್ತಿರುವದು




















