ಹೊಸ ಜಿಲ್ಲೆಗಾಗಿ ಆಗ್ರಹಿಸಿ ಸಿಂದಗಿ ಜಯ ಕರ್ನಾಟಕ ಸಂಘಟನೆ ಮನವಿ
ಇಂಡಿ : ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯು ಬಹುದೊಡ್ಡ ಜಿಲ್ಲೆಯಾಗಿದ್ದು, ಈಗ ವಿಭಜಿಸಿ ಒಂದು ಹೊಸ ಜಿಲ್ಲೆ ಸೃಷ್ಟಿ ಮಾಡಬೇಕೆಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ವಿಜಯಪುರ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೇ ಸಿಂದಗಿ ತಾಲೂಕು ಹೊಸ ಜಿಲ್ಲೆಯಾಗಲಿ ಎಂದು ಸಿಂದಗಿ ತಾಲೂಕಾ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿ ತಹಶಿಲ್ದಾರ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಸಂತೋಷ ಮನಗೂಳಿ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತಾನಾಡಿದ ಅವರು, ಸಿಂದಗಿ ತಾಲೂಕು ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಜನಸಂಖ್ಯೆಯಲ್ಲಿ ದೊಡ್ಡದಾಗಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ. ಆರ್.ಟಿ.ಓ. ಕಛೇರಿ – ಯಲ್ಲಿ ವಾಹನ ನೊಂದಣಿಯಲ್ಲಿ ಸಿಂದಗಿ ಮುಂದಿದೆ. ರಾಷ್ಟ್ರೀಯ ಹೆದ್ದಾರಿ -50 ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ. ಬರುವ ದಿನಗಳಲ್ಲಿ ಬ್ರಿಟಿಷರ ಕಾಲದಲ್ಲಿ ಸಮೀಕ್ಷೆ ಮಾಡಲಾಗಿದ್ದ ಶೇಡಬಾಳ-ಸಿಂದಗಿ ಶಹಾಬಾದ್ ರೇಲ್ವೇ ಮಾರ್ಗ – ಸೃಷ್ಟಿಯಾಗುವ ಲಕ್ಷಣಗಳಿದ್ದು, ಪೂರ್ವ ದಿಕ್ಕಿನಲ್ಲಿ ಕಲಬುರಗಿ ಹಾಗೂ ಪಶ್ಚಿಮದಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಗಳಿದ್ದು, ರಾಜ್ಯದ ರಾಜಧಾನಿ ಸಂಪರ್ಕಿಸಲು ಸಮಯದ ಉಳಿತಾಯ – ವಾಗುವುದು ಮತ್ತ ಉತ್ತಮ ಕೈಗಾರೀಕರಣ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಹೆಬ್ಬಾಗಿಲು ಆಗಿ ಭೌಗೋಳಿಕವಾಗಿ ಎರಡು ವಲಯಗಳನ್ನು ಸಂಪರ್ಕಿಸಿ ಸಾಂಸ್ಕೃತಿಕ ಪ್ರತಿಬಿಂಬವಾಗಿದೆ. ಸುತ್ತಮುತ್ತಲಿನ ಎಲ್ಲ ತಾಲೂಕುಗಳಿಗೆ ಕೇವಲ 20 ರಿಂದ 40 ಕೀಮಿ ಅಂತರ ಹೊಂದಿದ್ದು, ಇದರಿಂದ ಇಂಡಿ ಜಿಲ್ಲೆಯನ್ನು ಸೃಷ್ಟಿಸದೇ, ಸಿಂದಗಿ ಜಿಲ್ಲಾ ಕೇಂದ್ರವೆಂದು ಪರಿಗಣಿಸಿ ಈ ಭಾಗದ ಜನರ ಬಹುದಿನದ ಬೇಡಿಕೆಯಾದ – ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ತಾಳಿಕೋಟಿ ಈ ತಾಲೂಕುಗಳನ್ನು ಗಮನದಲ್ಲಿಟ್ಟು – ಕೊಂಡು ಈ ಎಲ್ಲಾ ವಿಷಯಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಂದಗಿ ತಾಲೂಕನ್ನು ನೂತನ ಜಿಲ್ಲೆಯಾಗಿ ಸರಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಮುನ್ನಾ ಮುಜಾವರ, ಅಣ್ಣಾರಾಯ ವಾಲಿಕಾರ, ಶರಣು ಮನಗೂಳಿ, ಭೀಮಣ್ಣ ಏಳಮೆಲಿ, ರಮೇಶ್ ರಾಠೋಡ, ರಂಗು ಬಾ ಚವ್ಹಾಣ, ಸಿದ್ದು ರಾಠೋಡ, ರಮೇಶ್ ರಾಠೋಡ, ಮನೋಜಕುಮಾರ ಪಾಟೀಲ್, ಅಶೋಕ ಪಾಟೀಲ್, ಸಹಾರಾ ಮುಜಾವರ, ಮಹ್ಮದ ಇಕ್ಬಾಲ್ ಮುಜಾವರ, ಸಿದ್ದು ಅಂಬೂಳರ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.