ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನ ಸರಕಾರ ಸತ್ತು ಹೋಗಿದೆ..! ಮಾಜಿ ಶಾಸಕ ನಡಹಳ್ಳಿ ಆರೋಪ.
———-
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ದಿವಾಳಿಯಾಗಿದೆ: ಮಾಜಿ ಶಾಸಕ ನಡಹಳ್ಳಿ ಆರೋಪ
——-
ಉ.ಕ ರೈತರ ಪರಿಸ್ಥಿತಿ ಹದಗೆಟ್ಟಿದೆ ಅತಿವೃಷ್ಟಿಗೆ ಬೆಳೆಗಳಾದ ತೊಗರಿ ಹತ್ತಿ, ಈರುಳ್ಳಿ ಪ್ರಮುಖ ಬೆಳೆಗಳು ಸಂಪೂರ್ಣ ಹಾನಿ.
ತಾಲೂಕ ಆಡಳಿತ ಕಂದಾಯ ಕೃಷಿ, ಪಿಡಿಒ, ತಲಾಟಿ ಸ್ಥಳೀಯ ಶಾಸಕರು ಭೇಟಿ ನೀಡಿಲ್ಲ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿಲ್ಲವೆಂದು: ಮಾಜಿ ಶಾಸಕ ನಡಹಳ್ಳಿ ಆರೋಪ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಕಳೆದ ೪೫/೫೦ ವರ್ಷಗಳಲ್ಲಿ ಸುರಿಯದ ನಿರಂತರ ಮಳೆಗೆ ಈಗ ಉ.ಕ ರೈತರ ಪರಿಸ್ಥಿತಿ ಹದಗೆಟ್ಟಿದೆ ಅತಿವೃಷ್ಟಿಗೆ ನಮ್ಮ ಭಾಗದ ಕಪ್ಪು ಮಣ್ಣು ತಡೆಯವುದಿಲ್ಲ ಈ ಭಾಗದ ಪ್ರಮುಖ ಬೆಳೆಗಳಾದ ತೊಗರಿ ಹತ್ತಿ, ಈರುಳ್ಳಿ ಪ್ರಮುಖ ಬೆಳೆಗಳು ಸಂಪೂರ್ಣ ಹಾಳಾಗಿವೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಒಂದುವರೆ ಲಕ್ಷ ಎಕರೆ ಬೆಳೆಗಳು ಸಂಪೂರ್ಣ ಹಾಳಾಗಿವೆ ೧೫೦೦ ಸಾವಿರ ಮನೆಗಳು ಮಳೆಗೆ ಕುಸಿದು ಬಿದ್ದವೆ ಇಷ್ಟಾದರೂ ಸಂಬಂಧಿಸಿದ ತಾಲೂಕ ಆಡಳಿತ ಕಂದಾಯ ಕೃಷಿ, ಪಿಡಿಒ, ತಲಾಟಿ ಸ್ಥಳೀಯ ಶಾಸಕರು ಭೇಟಿ ನೀಡಿಲ್ಲ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿಲ್ಲವೆಂದು ಬಿಜೆಪಿ ರಾಜ್ಯ ರೈತಮೋರ್ಚಾ ರಾಜಾಧ್ಯಕ್ಷ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ತಾಲೂಕ ಆಡಳಿತ ಹಾಗೂ ಶಾಸಕರ ವಿರುದ್ಧ ಸೋಮುವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನ ಸರಕಾರ ಸತ್ತೂಗಿದೆ ಮತಕ್ಷೇತ್ರದ ಬಡವರ ಪರ ರೈತರಪರ ಸರಕಾರವಿಲ್ಲ ತಾಲೂಕಿನಲ್ಲಿ ಅತಿವೃಷ್ಟಿಯಾದರೂ ಶಾಸಕರು ಒಂದೇ ಒಂದು ಹಳ್ಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಬೆಳೆಹಾನಿ ಮನೆಹಾನಿ ಬಗ್ಗೆ ಮಾಹಿತಿ ಒದಗಿಸಿಲ್ಲ ನಮ್ಮ ತಾಲೂಕು ಅಷ್ಟೇ ಅಲ್ಲ ನಮ್ಮ ಜಿಲ್ಲೆಯಲ್ಲಿ ಒಂದು ರೂ ಪರಿಹಾರ ನೀಡಿದರ ಬಗ್ಗೆ ಮಾಹಿತಿ ಇಲ್ಲಾ ತಾಲ್ಲೂಕಿನಲ್ಲಿ ಯಾರು ಹೇಳೂರು ಇಲ್ಲ ಕೇಳೂರು ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರ ದಿವಾಳಿಯಾಗಿದೆ ಜಿಲ್ಲಾಧಿಕಾರಿ ತಹಶಿಲ್ದಾರ ಖಾತೆಯಲ್ಲಿ ಬಿಡಿಗಾಸು ಇಲ್ಲಾ ಬೆಳೆಹಾನಿಗೆ ಕುಸಿದ ಮನೆಗಳಿಗೆ,ಗಾಯಗೊಂಡವರಿಗೆ, ಮಳೆಗೆ ಮೃತಪಟ್ಟ ಜಾನುವಾರುಗಳಿಗೆ ೧ ರೂ ಪರಿಹಾರ ನೀಡಿಲ್ಲವೆಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಶಂಕರಗೌಡ ಎಸ್ ಶಿವಣಗಿ, ಯುವಮೋರ್ಚಾ ಅಧ್ಯಕ್ಷ ಗಿರೀಶಗೌಡ, ಪಾಟೀಲ್ ಹಿರೇಮುರಾಳ,ಬಿಜೆಪಿ ಜಿಲ್ಲಾ ಮುಖಂಡ ಅಶೋಕ ರಾಠೋಡ, ಸಂಜಯ ಬಾಗೇವಾಡಿ ನಾಗೇಶ ಕವಡಿಮಟ್ಟಿ ಅನಿಲ ರಾಠೋಡ,ಸೇರಿದಂತೆ
ಉಪಸ್ಥಿತರಿದ್ದರು.
ನನ್ನ ಅಂದಾಜು ಮತಕ್ಷೇತ್ರದದಲ್ಲಿ ಒಂದುವರೆ ಲಕ್ಷ ಎಕರೆ ಬೆಳೆ ಸಂಪೂರ್ಣ ಹಾನಿಯಾಗಿದ್ದರೆ ಇನ್ನೂ ಒಂದುವರೆ ಲಕ್ಷ ಎರಕೆ ಭಾಗಶಃ ೭೫% ಬೆಳೆಹಾನಿಯಾಗಿವೆ ಕೆಲವಡೆ ಕಬ್ಬು ಗಾಳಿಗೆ ಮುರಿದು ಬಿದ್ದಿವೆ ನಮ್ಮ ಬಿಜೆಪಿ ಸರಕಾರದ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಒಬ್ಬರೇ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಪರಿಹಾರ ಒದಗಿಸಿದ್ದಾರೆ ದಸರಾ ಹಬ್ಬದ ಮುಗಿಯುವವರೆಗೆ ಸ್ಥಳೀಯ ಶಾಸಕರು ಹಾಗೂ ತಾಲೂಕು ಆಡಳಿತ ಅಧಿಕಾರಿಗಳಿಗೆ ಕೃಷಿ ಅಧಿಕಾರಿಗಳಿಗೆ ಕಾಲಾವಕಾಶ ನೀಡುತ್ತೇನೆ ಅದರೂಳಗೆ ಅತಿವೃಷ್ಟಿ ಸಂತ್ರಸ್ತರ ಮನೆ ಮನೆಗೆ ,ಜಮೀನುಗಳಿಗೆ ಭೇಟಿ ನೀಡಿ ಪರಿಹಾರ ಒದಗಸಿಸಬೇಕು ಒದಗಿಸದೆ ಇದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಒಂದು ತಿಂಗಳ ಹಿಂರೆ ಕುಂಚಗನೂರು ರೈತ ಮೊಸಳೆ ದಾಳಿಗೆ ಬಲಿಯಾಗಿದ್ದಾನೆ, ಅರೆಮುರಾಳದಲ್ಲಿ ಮಳೆಗೆ ಮನೆ ಕುಸಿದು ನಾಲ್ಕು ಜನ ಗಾಯಗೂಂಡರು ನಾಗಬೇನಾಳದಲ್ಲಿ ತೂಳಗಳ ದಾಳಿಗೆ ಕುರಿಮೇಕೆ ಬಲಿಯಾದವು ಇವರಿಗೆ ಇಲ್ಲಿಯವರೆಗೆ ಒಂದು ರೂ ಪರಿಹಾರ ನೀಡಿಲ್ಲಾ, ಜಿಲ್ಲಾ ಉಸ್ತುವಾರಿ ಸಚಿವರು ಭೀಮಾನದಿ ಪ್ರವಾಹಕ್ಕೆ ಬೇಟಿ ನೀಡಿದರಷ್ಟೇ ಯಾರಿಗೂ ಪರಿಹಾರ ನೀಡಿಲ್ಲ ತಾಳಿಕೋಟಿ ದೋಣಿಯಲ್ಲಿ ಯುವಕ ಹರಿದು ಹೋದರು ಅವರ ಮನೆಗೆ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ ಮೊಸಳೆ ದಾಳಿಗೆ ಮೃತ ಕುಟುಂಬಕ್ಕೆ ಸ್ವಾಂತನ ಹೇಳುವ ಪರಿಹಾರ ನೀಡುವ ಕೆಲಸ ಉಸ್ತುವಾರಿ ಸಚಿವರು ಮಾಡಿಲ್ಲ; ಎ.ಎಸ್ ಪಾಟೀಲ್ ನಡಹಳ್ಳಿ,ಮಾಜಿ ಶಾಸಕರು.