ತಿಂಥಣಿ ಬ್ರೀಜ್ : ಕಲಬುರಗಿಯಲ್ಲಿ ಜರುಗಿದ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಂಡಿಬೆಲೆ ಶಾಮಣ್ಣ ಸ್ಮಾರಕ ರಾಜ್ಯ ಪ್ರಶಸ್ತಿಗೆ ಭಾಜನರಾದ ಮುದಗಲ್ ಪಟ್ಟಣದ ವಿಜಯವಾಣಿ ವರದಿಗಾರ ಶರಣಯ್ಯ ಬಿ. ಒಡೆಯರ್ ರವರಿಗೆ ಕಾಗಿನೆಲೆ ಶ್ರೀ ಕನಕಗುರು ಪೀಠದ ಶ್ರೀ ಸಿದ್ದರಾಮನಂದ ಸ್ವಾಮಿಗಳು ಶ್ರೀ ಮಠದಲ್ಲಿ ಬುಧವಾರ ಸನ್ಮಾನಿಸಿ ಆಶಿರ್ವಾದಿಸಿದರು.
ಈ ಸದಂರ್ಭದಲ್ಲಿ ಬಾದಮಿನಾಳ ಶ್ರೀ ಶಿವಸಿದ್ದೇಶ್ವರ ಸ್ವಾಮಿ, ಕನಕ ನೌಕರರ ಸಂಘದ ಅಧ್ಯಕ್ಷ ನೀಲಪ್ಪ ಹೊಸಮನಿ,ಶಿವಾನಂದ ನರಹಟ್ಟಿ, ಮುಕ್ಕಣ್ಣ, ನಂದು ಪೂಜಾರಿ, ಮಲ್ಲು ದಂಡಿನ, ಮಲ್ಲಿಕಾರ್ಜುನ ರಾಂಪುರು, ಚನ್ನಬಸವ ಕನ್ನಾಪುರಹಟ್ಟಿ ಸೇರಿದಂತೆ ಇನ್ನಿತರರು ಇದ್ದರು.