ವಿಧ್ಯಾರ್ಥಿನಿ ನೇಹಾ ಕೊಲೆಗಡುಕನಿಗೆ ಶೂಟೌಟಗೆ ಆಗ್ರಹ..!
ಇಂಡಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಕೊಲೆ ಮಾಡಿದ ಕೊಲೆಗಡುಕನಿಗೆ
ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು. ಸರಕಾರ
ಕೀಳು ಹೇಳಿಕೆ ನೀಡುವುದನ್ನು ಬಿಟ್ಟು ಮಹಿಳೆಯರ
ರಕ್ಷಣೆಗೆ ಮುಂದಾಗಬೇಕು ಎಂದು ವಿಜಯಪೂರ
ವಿಭಿನ್ನ ಅಭಿವೃಧ್ಧಿ ಸಂಸ್ಥೆ ಅಧ್ಯೆಕ್ಷೆ ಶಾಮಲಾ ಬಗಲಿ, ಶಶಿಕಲಾ ಬೆಟಗೇರಿ, ಅನಸೂಯಾ ಮದರಿ, ರಾಜೇಶ್ವರಿ ಕ್ಷತ್ರಿ, ಆಗ್ರಹಿಸಿದರು.
ಅವರು ಮಂಗಳವಾರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಆಡಳಿತ ಸೌಧ ಮುಂಭಾಗದಲ್ಲಿ ಶಿರಸ್ಥೇದಾರ ಆರ್.ಎಸ್ ಮುಜಗೊಂಡ ಅವರ ಮುಖಾಂತರ ಸರಕಾರಕ್ಕೆ ಮನವಿ ಮಾಡಿದರು.
ಇಂತಹ ಕೊಲೆಗಳಾಗುತ್ತಿರುವುದರಿಂದ ಶಾಲಾ
ಕಾಲೇಜಿಗೆ ಮಕ್ಕಳನ್ನು ಕಳುಹಿಸಿಕೊಡಲು ಭಯದ
ವಾತಾವರಣ ನಿರ್ಮಾಣವಾಗಿದೆ. ನೇಹಾ ಹಿರೇಮಠ
ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಆರೋಪಿಗೆ ಸರಕಾರ
ಅಕ್ಕ ಶಿಕ್ಷೆ ವಿಧಿಸಬೇಕು. ತಪ್ಪಿತಸದ್ಥರ ಮೇಲೆ ಸೂಕ್ತ
ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು
ಆಗ್ರಹಿಸಿದರು.
ನಿತಿನ್‍ಕುಮಾರ್ ಆರಿ, ಹಿರಿಯ ನ್ಯಾಯವಾದಿ ಎಸ್.ಜೆ. ವಾಲೀಕಾರ, ಐಶ್ವರ್ಯ ಮಾದರ್, ನಿಖಿತಾ ರಾಠೋಡ, ದೀಪಾ ಆಲಮೇಲ, ಸ್ನೇಹಾ ನಾಟೀಕಾರ್, ಬೀನಾ ಕೂಡಗಿ, ಭೌರಮ್ಮ ನಾವಿ, ಸ್ನೇಹಾ ನಾಟೀಕಾರ, ಕೀರ್ತಿ ಬನಸೋಡೆ, ವೈಶಾಲಿ ಬಣಿಗೇರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ನೇಹಾ ಹಿರೇಮಠ ಕೊಲೆಗಡುಕನಿಗೆ ಶಿಕ್ಷೆ
ವಿಧಿಸಬೇಕೆಂದು ಆಗ್ರಹಿಸಿ ವಿಜಯಪೂರ ವಿಭಿನ್ನ
ಅಭಿವೃಧ್ಧಿ ಸಂಸ್ಥೆ ವತಿಯಿಂದ ಶಿರಸ್ಥೇದಾರ ಆರ್.ಎಸ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.