ಸಿರವಾರ: ಪಟ್ಟಣದಲ್ಲಿ ಶಿವರಾತ್ರಿಯನ್ನು ಶ್ರದ್ದೆ, ಭಕ್ತಿಯಿಂದ ಆಚರಿಸಲಾಯಿತು. ಶಿವರಾತ್ರಿ ಹಬ್ಬದ ಅಂಗವಾಗಿ ಭಕ್ತರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಪಟ್ಟಣದಲ್ಲಿರುವ ಶಿವನ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು ವಿವಿಧ ರೀತಿಯ ನೈವೇದ್ಯ ಸಮರ್ಪಿಸಿದರು.
ಹಬ್ಬದ ನಿಮಿತ್ತವಾಗಿ ಅಂಚೆ ಕಚೇರಿ ಹತ್ತಿರದ ಈಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾಯಂಕಾಲ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಶಿವರಾತ್ರಿ ಅಂಗವಾಗಿ ಭಕ್ತರು ಉಪವಾಸ ಜಾಗರಣೆ ಕೈಗೊಂಡು ಶಿವನ ಧ್ಯಾನ ಮಾಡಿದರು.