ಪ್ರೊ ಎಚ್ ಟಿ ಪೋತೆಗೆ ಶಿವರಾಮ ಕಾರಂತ ಪ್ರಶಸ್ತಿ
ಇಂಡಿ: ಶಿವರಾಮ ಕಾರಂತ ಪ್ರತಿಷ್ಠಾನ ಮೂಡಬಿದರೆ
ಕಳೆದ 33 ವರ್ಷಗಳಿಂದ ಪ್ರತೀ ವರ್ಷ ಕೊಡ ಮಾಡುತ್ತಿರುವ ಶಿವರಾಮ ಕಾರಂತ ಪ್ರಶಸ್ತಿಯನ್ನು 2023ನೇ ಸಾಲಿಗೆ ಇಂಡಿ ತಾಲ್ಲೂಕಿನ ಹಂಜಗಿ
ಗ್ರಾಮದ ಪ್ರೊ ಎಚ್.ಟಿ.ಪೋತೆ (ಈ ಸದ್ದೆ ಕಲಬುರಗಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ
ಮುಖ್ಯಸ್ಥರು) ಅವರಿಗೆ ಲಭಿಸಿದೆ.
ಮೇ 29 ರಂದು ಮೂಡಬಿದರೆಯ ಸ್ವರಾಜ್ಯ ಮೈದಾನದ ಕನ್ನಡ ಭವನದಲ್ಲಿ ಮಧ್ಯಾಹ್ನ 4 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 10000 ರೂ, ಗಳ ನಗದು ಮತ್ತು ಪ್ರಶಸ್ತಿಫಲಕವನ್ನು ಒಳಗೊಂಡಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪುತ್ತೂರಿನ ಲಕ್ಷ್ಮೀಶ ತೋಳ್ಪಾಡಿ ಉದ್ಘಾಟಿಸಲಿದ್ದಾರೆ. ಶಿವರಾಮ ಕಾರಂತ ಪ್ರತಿಷ್ಠಾನ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ
ಅಧ್ಯಕ್ಷತೆ ವಹಿಸಲಿದ್ದಾರೆ.
ಇಂಡಿ: ಎಚ್.ಟಿ. ಪೊತೆ