ಶಿವಮೊಗ್ಗ ಗಲಭೆ; ಕಿಡಿಗೇಡಿಗಳ ವಿರುದ್ದ ಕಠೀಣ ಕ್ರಮಕ್ಕೆ ಆಗ್ರಹಿಸಿ ಭಜರಂಗದಳ ಪ್ರತಿಭಟನೆ..
ಇಂಡಿ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅಮಾನುಷ್ಯ ಕೃತ್ಯ
ಖಂಡಿಸಿ ತಪ್ಪಿತಸ್ಥರ ವಿರುಧ್ಧ ಸೂಕ್ತ ಕಾನೂನು ಕ್ರಮ
ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್
ಭಜರಂಗದಳ ಕಾರ್ಯಕರ್ತರು ಬುಧವಾರ ಗ್ರೇಡ್-2
ತಹಸೀಲ್ದಾರ ಧನಪಾಲಶೆಟ್ಟಿ ದೇವೂರ ಅವರ ಮೂಲಕ
ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಜರಂಗದಳ ಜಿಲ್ಲಾ ಪ್ರಮುಖ
ಪ್ರಕಾಶ ಬಿರಾದಾರ, ಇಂಡಿ ತಾಲೂಕಾ ಅಧ್ಯಕ್ಷ ನೇತಾಜಿ
ಪವಾರ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಈದ್
ಮಿಲಾದ್ ಹಬ್ಬದ ಮೆರವಣಿಗೆ ಸಮಯದಲ್ಲಿ ಅನ್ಯ
ಕೋಮಿನ ಯುವಕರು ಸ್ಥಳೀಯ ಹಿಂದೂ ಸಮುದಾಯದ ಯುವಕರ ಮೇಲೆ ಅಪಾರ ಪ್ರಮಾಣದ
ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ. ಅಲ್ಲದೆ ಗಲಭೆ ನಿಯಂತ್ರಿ ಸಲುಸ್ಥಳಕ್ಕೆ ಧಾವಿಸಿದ್ದ ಆರಕ್ಷಕ ಸಿಬ್ಬಂದಿಗಳ ಮೇಲೆಯೂ ಹಲ್ಲೆ ನಡೆಸಿದ್ದು ಕಾನೂನಿನ ಅಡಿಯಲ್ಲಿ ಗಲಭೆ – ಕೋರರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಒಂದು ವೇಳೆ ಗಲಭೇಕೋರರನ್ನು ರಕ್ಷಿಸುವ ಹುನ್ನಾರವನ್ನೇನಾದರೂ ಸರಕಾರ ಮಾಡಿದರೆ ರಾಜ್ಯದಿಂದಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಿರಾದಾರ, ಸಿದ್ದಾರಾಮ ಬೋಳಸೂರ, ವಿನೋದ ಸೂರ್ಯವಂಶಿ, ಸಚಿನ್ ನಾಗಣೆ, ಈರಣ್ಣ ಸಿಂದಗಿ, ಅಭೀಷೇಕ ಸಿಂದಗಿ ಸೇರಿದಂತೆ ಇನ್ನಿತರರು ಇದ್ದರು.