ಅಫಜಲಪುರ : ತಾಲೂಕಿನಲ್ಲಿ ಮಾರ್ಚ್ 6 ರಂದು ಭಾರಿ ಜನಸ್ತೋಮದೊಂದಿಗೆ ಯಶಸ್ವಿಯಾಗಿ ಅಫಜಲಪೂರ “ಪ್ರಗತಿ ಸಂಕಲ್ಪ ಸಮಾವೇಶ” ಕಾರ್ಯಕ್ರಮ ನಡೆದಿತ್ತು. ಸಮಾವೇಶದಲ್ಲಿ ಬಂಕಲಗಾ ಗ್ರಾಮದ ವಿಠ್ಠಲ ಹಿಳ್ಳಿ ಎಂಬ ಯುವಕ ಓಡಾಟದಲ್ಲಿ ಆಕಸ್ಮಿಕವಾಗಿ ಬೈಕ್ ಅಪಘಾತ ಆಗಿತ್ತು. ಬಳಿಕ ವಿಠಲ 20 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು.
ಸುದ್ದಿ ತಿಳಿದ ಅಫಜಲಪುರ ವಿಧಾನಸಭಾ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಶಿವಕುಮಾರ ನಾಟೀಕಾರ ಅವರು ಯುವಕನಿಗೆ 10 ಸಾವಿರ ರೂ.ಗಳ ಸಹಾಯಧನ ನೀಡಿ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದ್ದಾರೆ.
ಈ ಸಂದರ್ಭದಲ್ಲಿ ಜಮಿಲ್ ಗೌಂಡಿ, ಮಲ್ಲಿಕಾರ್ಜುನ ಸಿಂಗೆ, ಶ್ರೀಕಾಂತ ದಿವಾಣಜಿ, ಜೆಡಿಎಸ್ ಸದಸ್ಯರು, ಕಾರ್ಯಕರ್ತರ, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.