ಇಂಡಿ: ಶಿಕ್ಷಣತಜ್ಞೆ, ಸ್ತ್ರೀವಾದಿ ಐಕಾನ್, ಸಮಾಜ ಸುಧಾರಕಿಯ ಫಾತಿಮಾ ಶೇಖ್ ಅವರ 191 ನೇ ಜಯಂತಿ ಆಚರಿಸಲಾಯಿತು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದ ವಿಶ್ವಜ್ಞಾನಿ ಗ್ರಂಥಾಲಯದಲ್ಲಿ ಜಯಂತಿ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ನೇತೃತ್ವದಲ್ಲಿ ಮುದ್ದು ಮಕ್ಕಳು ಮತ್ತು ಸ್ನೇಹಿತರು ಸೇರಿ ಆಚರಣೆ ಮಾಡಿದರು.
ಫಾತಿಮಾ ಶೇಖ್ ಅವರು ಹೆಣ್ಣು ಮಕ್ಕಳ ಶಿಕ್ಷಣ ಶೈಲಿ ಬದಲಿಸಲುˌ ದೀನದಲಿತ ಸಮುದಾಯಗಳಲ್ಲಿ ಶಿಕ್ಷಣವನ್ನು ಕೊಡುವ ಪರಿಕಲ್ಪನೆ ಮೂಡಿಸಿಕೊಂಡವರು ಮತ್ತು ಸಮಾಜದ ಸುಧಾರಕಿಯಾಗಿದ್ದರು. ಆಧುನಿಕ ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕರಲ್ಲಿ ಒಬ್ಬರಾದ ಅವರು ಫುಲೆಸ್ ಶಾಲೆಯಲ್ಲಿ ಬಹುಜನ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದರು . ಎಲ್ಲಾ ಧರ್ಮ ಮತ್ತು ಜಾತಿಗಳ ಮಕ್ಕಳಿಗೆ ಬೇದ ಭಾವ ವಿಲ್ಲದೇ ಬೊಧನೆ ಮಾಡಿದ ಭಾರತೀಯ ಶಿಕ್ಷಣತಜ್ಞೆ ಎಂದರು. ಮುಂದೆ ಸತ್ಯಶೋಧಕ್ ಆಂದೋಲನದಲ್ಲಿ ತೊಡಗಿಸಿಕೊಂಡವರನ್ನು ಅವಮಾನಿಸಲು ಪ್ರಯತ್ನಿಸಿದ ಪ್ರಬಲ ವರ್ಗಗಳಿಂದ ಅವಳು ದೊಡ್ಡ ಪ್ರತಿರೋಧವನ್ನು ಎದುರಿಸಿದಳು. ಆದರೆ ಶೇಖ್ ಮತ್ತು ಅವಳ ಮಿತ್ರರು ಎದೆಗುಂದದೆ ಎಲ್ಲಾ ಅವಮಾನಗಳನ್ನು ಸನ್ಮಾನಗಳೆಂದು ಸ್ವೀಕರಿಸಿ ಸಮಾಜಮುಖಿ ಕಾರ್ಯಗಳಲ್ಲಿ ಮುಂದುವರೆದರು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಠೋಬಾ ರಾಜು ದಶವಂತˌ ಲಕ್ಷ್ಮಣ್ಣ ದಶವಂತˌರವಿ ದಶವಂತˌ ಕಲ್ಮೇಶ ದಶವಂತˌ ಸುಖದೇವ ದಶವಂತˌ ದಯಾನಂದ ದಶವಂತ ˌ ಸಿದ್ದಾರಾಮ ದಶವಂತˌ ತಮ್ಮಣ್ಣ ದಶವಂತˌ ಮಂಜು ದಶವಂತ ಮತ್ತು ಮುದ್ದು ಮಕ್ಕಳು ಉಪಸ್ಥಿತರು.