ಬಾಂಗ್ಲಾ ಪ್ರಧಾನಿಯಾದ ಶೇಖ್ ಹಸೀನಾ, ಇದು ಎಷ್ಟನೇ ಬಾರಿ..?
Voice Of Janata : Editor : ಢಾಕಾ
ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ ಐದನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಮರು ಆಯ್ಕೆಯಾಗಿದ್ದಾರೆ.
ಬಾಂಗ್ಲಾದೇಶದ ಲೋಕಸಭೆ ಚುನಾವಣೆಯಲ್ಲಿ ಅವಾಮಿ ಲೀಗ್ ಅಧ್ಯಕ್ಷೆ ಮತ್ತು ಪ್ರಧಾನಿ ಶೇಖ್ ಹಸೀನಾ ಅವರು ಗೋಪಾಲ್ಗಂಜ್-3 (ತುಂಗಿಪಾರಾ-ಕೋಟ್ಲಿಪಾರಾ) ದಾಖಲೆ ಸಂಖ್ಯೆಯ ಮತಗಳಿಂದ ಜಯಿಸಿದ್ದಾರೆ.
ಸಮೀಪದ ಪ್ರತಿಸ್ಪರ್ಧಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಭ್ಯರ್ಥಿ ಶೇಖ್ ಅಬುಲ್ ಕಲಾಂ ವಿರುದ್ಧ ಬಹುಮತಗಳನ್ನು ಪಡೆಯುವುದರ ಮೂಲಕ 5ನೇ ಬಾರಿಗೆ ಬಾಂಗ್ಲಾ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಶೇಖ್ ಹಸೀನಾ ಅವರು ಢಾಕಾ ಆಡಳಿತ ವಿಭಾಗದ ಅಡಿಯಲ್ಲಿ ಗೋಪಾಲ್‌ಗಂಜ್ ಜಿಲ್ಲೆಯ ಗೋಪಾಲ್ ಗಂಜ್-3 ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಂತರು. ಗೋಪಾಲಗಂಜ್ ಹಸೀನಾ ಅವರ ಜನ್ಮಸ್ಥಳ. 1991ರಿಂದ ಹಸೀನಾ ಈ ಕೇಂದ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ. ಆದರೆ, ಈ ಬಾರಿ ಪಡೆದ ಮತಗಳು ಕಳೆದ ಆರು ಬಾರಿಯ ದಾಖಲೆಯನ್ನು ಮುರಿದಿವೆ. ಮಾಧ್ಯಮ ವರದಿಗಳ ಪ್ರಕಾರ, “ಅವಾಮಿ ಲೀಗ್ ಅಧ್ಯಕ್ಷೆ ಮತ್ತು ಪ್ರಧಾನಿ ಶೇಖ್ ಹಸೀನಾ ಅವರು ಗೋಪಾಲ್ಗಂಜ್ -3 (ತುಂಗಿಪಾರಾ-ಕೋಟ್ಲಿಪಾರಾ) ಕ್ಷೇತ್ರದಲ್ಲಿ ವೈಯಕ್ತಿಕವಾಗಿ ಆಯ್ಕೆಯಾಗಿದ್ದಾರೆ.