ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯರ ಭೇಟಿ
ಆಸ್ಪತ್ರೆ ಮತ್ತು ವಸತಿ ನಿಲಯಕ್ಕೆ ಭೇಟಿ
ಇಂಡಿಯಲ್ಲಿ ಆಸ್ಪತ್ರೆ ಹಾಗೂ ವಸತಿ ನಿಲಯಕ್ಕೆ ದಿಢೀರ್ ಬೇಟಿ ನೀಡಿದ ಶಶಿಧರ್ ಕೊಸಂಬೆ
ಇಂಡಿ : ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೊಸಂಬೆಯವರು ಇಂಡಿ ಪಟ್ಟಣಕ್ಕೆ ಭೇಟಿ ನೀಡಿ ಇಂಡಿಯ ಡಾ|| ಪ್ರೀತಿ ಕೋಳೆಕರ, ಡಾ|| ಭಾರತಿ ಗಜಾಕೋಶ, ಡಾ|| ಮಯೂರಿ ಧನಶೆಟ್ಟಿ ಆಸ್ಪತ್ರೆಗಳಿಗೆ ಭೇಟಿ ಗರ್ಬಪಾತ ನಡೆಸುವ ಸ್ಕ್ಯಾನಿಂಗ್ ಸೆಂಟರ್ ಕುರಿತು ತಪಾಸಣೆ ಮಾಡಿದರು. ಮತ್ತು ಪಿಸಿಪಿಎನ್‌ಡಿಟಿ ಸ್ಕ್ಯಾನಿಂಗ್ ಕಾಯ್ದೆ ಅನ್ವಯ ಸಂಬಂಧಿತ ಪ್ರತಿಯೊಂದು ಆಸ್ಪತ್ರೆಯವರು ಪಾಲಿಸಬೇಕು. ಕಾಯ್ದೆ ಉಲ್ಲಂಘಿಸಿದವರಿಗೆ ಸಂಬAದಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.
ದವಾಖಾನೆಗಳ ರಿನ್ಯೂವಲ್ ಮಾಡಿಸಬೇಕು, ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಸ್ಕ್ಯಾನಿಂಗ್ ಮಾಡುವ ಮಸೀನು ಪರಿಶೀಲಿಸಿ ಅಲ್ಲಿ ಗರ್ಭಪಾತ ನಡೆಯುವದೇ ಎಂದು ಪರಿಶೀಲಿದರು. ಸ್ಕಾö್ಯನ್ ಮಾಡುವ ಮಶೀನು ಮತ್ತು ಪ್ರತಿದಿನ ಎಷ್ಟು ರೋಗಿಗಳು ಬರುತ್ತವೆ ಎಂಬುದನ್ನು ದಿನ ನಿತ್ಯದ ಡೈರಿ ಇಡಬೇಕು ಸೇರಿದಂತೆ ಇನ್ನಿತರ ಗರ್ಬಪಾತ ನಡೆಸದಂತೆ ಕುರಿತು ಪರಿಶೀಲನೆ ನಡೆಸಿದರು.
ಪಟ್ಟಣದ ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ತೊಂದರೆಗಳನ್ನು ಕೇಳಿದರು. ವಸತಿ ನಿಲಯದಲ್ಲಿ ನೀಡುವ ಊಟ, ಸ್ನಾನಗೃಹ, ಕುಡಿಯುವ ನೀರಿನ ವ್ಯವಸ್ಥೆ, ಅಡುಗೆ ಕೋಣೆ ಸೇರಿದಂತೆ ಎಲ್ಲವನ್ನು ಪರಿಶೀಲಿಸಿದರು.
ವಿದ್ಯಾರ್ಥಿನಿಯರು ವಸತಿ ನಿಲಯದ ಮುಂದೆ ಕೆಎಸ್ ಆರ್ ಟಿಸಿ ಬಸ್ಸು ನಿಲುಗಡೆ ಯಾಗುವಂತೆ ಕೇಳಿಕೊಂಡರು. ವಸತಿ ನಿಲಯದಲ್ಲಿ ಕಂಪ್ಯೂಟರ್ ವ್ಯವಸ್ಥೆ ಬೇಕು ಮತ್ತು ಪ್ರತಿ ದಿನ ನೀರು ಬರುವದಿಲ್ಲ, ನೀರಿನ ವ್ಯವಸ್ತೆ ಯಾಗಬೇಕು ಎಂದರು. ಕುಡಲೇ ಸಂಬಂಧಿತ ಅಧಿಕಾರಿಗಳಿಗೆ ಮಾತನಾಡಿ ವ್ಯವಸ್ಥೆ ಸರಿಪಡಿಸಲು ಕೇಳಿಕೊಂಡರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ ಮಂಜುಳಾ ನಾಯಕ, ವಿಜಯಪುರ ಸಿಡಿಪಿಒ ಬಸವರಾಜ ಜಿಗಳೂರ ಮತ್ತಿತರಿದ್ದರು.