ರಾಯಚೂರು: ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ತಾಲೂಕಿನ ಕೃಷ್ಣ ನದಿ ಸೇತುವೆ ಮೇಲೆ ಮಿನಿ ಟ್ಯಾಂಕರ್ ಹೊತ್ತಿ ಉರಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ತೆಲಂಗಾಣ ಮೂಲದ ಮಿನಿ ಟ್ಯಾಂಕರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಟೈರ್ ಗಳಿಗೆ ಹೊತ್ತಿಕೊಂಡಿದೆ ಬಳಿಕ ಇಡೀ ವಾಹನ ಸುಟ್ಟು ಹೋಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಹೈದರಬಾದ್ ಮುಖ್ಯರಸ್ತೆಯಾದ ಕಾರಣ ಘಟನೆಯಿಂದ ಕೆಲಕಾಲ ಪ್ರಯಾಣಿಕರ ಸಂಚಾರಕ್ಕೆ ಅಡಚಣೆಯಾಯಿತು