ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ..!
ಶರಣಬಸವೇಶ್ವರ ಜಾತ್ರೆಯಲ್ಲಿ ನಡೆದ ಆರೋಗ್ಯ
ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ
ಇಂಡಿ: ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ನೀವು
ಮಾಡುವ ರಕ್ತದಾನ ಇನ್ಯಾರದೋ ಜೀವಕ್ಕೆ ವರದಾನ
ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ, ನೀವು
ಉಡುಗೊರೆಯಾಗಿ ನೀಡಲಿರುವ ರಕ್ತಕ್ಕಾಗಿ ಒಂದು
ಅಮೂಲ್ಯ ಜೀವ ಕಾಯುತ್ತಿದೆ ಎಂದು ಆಧ್ಯಾತ್ಮ
ಪ್ರವಚನಕಾರ ಮೈತ್ರಾದೇವಿ ಹೇಳಿದರು.
ಸೋಮವಾರ ತಾಲೂಕಿನ ಹಿರೇಮಸಳಿ ಗ್ರಾಮದ
ಶರಣಬಸವೇಶ್ವರ ಜಾತ್ರೆಯಲ್ಲಿ ನಡೆದ ಆರೋಗ್ಯ
ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ
ಅವರು ಮಾತನಾಡಿದರು. ಅನ್ನದಾನ, ವಿದ್ಯಾದಾನ, ನೇತ್ರದಾನ ಹಾಗೂ ರಕ್ತದಾನವು ಅತಂತ್ಯ ಶ್ರೇಷ್ಠವಾದ ಕಾರ್ಯಗಳಾಗಿವೆ. ಪ್ರತಿಯೊಬ್ಬರು ಇಂತಹ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದ್ಯೆಂದು ಹೇಳಿದರು.
ವಿಜಯಪುರದ ಬಿಎಲ್‍ಡಿಇ ಆಸ್ಪತ್ರೆಯ ವೈದ್ಯರ ತಂಡ
ಜನರ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ
ನೀಡಿದರು. ಉಚಿತ ಕಣ್ಣಿನ ಪೆÇರೆ ತಪಾಸಣೆ ನಡೆಸಿ, ಶಸ್ತ್ರ
ಚಿಕಿತ್ಸೆಯ ಅಗತ್ಯವುಳ್ಳವರಿಗೆ ಆಸ್ಪತ್ರೆಗೆ ಬರುವಂತೆ
ತಿಳಿಸಿದರು.
ಶಿಬಿರದಲ್ಲಿ ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ ದೊಡಮನಿ,
ಗ್ರಾಪಂ ಸದಸ್ಯರಾದ ಶಿವನಗೌಡ ಪಾಟೀಲ,ಮಹಮ್ಮದಲಿ
ಗೊಗಿಹಾಳ, ಶ್ರೀಕೃಷ್ಣ ಸುಣಗಾರ, ಬೊಜಪ್ಪ ಚಾಣಕೊಟೆ,
ಅಶೋಕ ಮರಡಿ, ರಾಜಕುಮಾರ ಹುಬ್ಬಳ್ಳಿ, ಶಿವಾನಂದ
ಕ್ಷತ್ರಿ, ಪ್ರವೀಣ ಮನಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ, ಡಾ|| ಪ್ರಶಾಂತ ದೂಮಗೊಂಡ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಬಿಎಲ್‍ಡಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಆಶಾ
ಕಾರ್ಯಕರ್ತೆಯರು ಇದ್ದರು.
ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ಶರಣಬಸವೇಶ್ವರ ಜಾತ್ರೆಯಲ್ಲಿ ನಡೆದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಸಾಲುಗಟ್ಟಿ ನಿಂತು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು.
ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸುಮಾರು 58 ಯೂನಿಟ್ ರಕ್ತದಾನ ಮಾಡಲಾಯಿತು.