ಶಾಂತೇಶ್ವರ ಟ್ರಸ್ಟ ಕಮೀಟಿ : ಲೆಕ್ಕ ಪತ್ರ ನೀಡಲು ಆಗ್ರಹ
ಇಂಡಿ : ಪಟ್ಟಣದ ಗ್ರಾಮ ದೇವತೆ ಶ್ರೀ ಶಾಂತೇಶ್ವರ ದೇವಸ್ಥಾನದ ಮತ್ತು ಹಿರೇಇಂಡಿ ದೇವಸ್ಥಾನದ ಲೆಕ್ಕ ಪತ್ರ ನೀಡಬೇಕೆಂದು ಆಗ್ರಹಿಸಿ ಸಾರ್ವಜನಿಕರು ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಸುಗೌಡ ಬಿರಾದಾರ ಇವರನ್ನು ಆಗ್ರಹಿಸಿದರು.
ಶ್ರೀ ಶಾಂತೇಶ್ವರ ದೇವಸ್ಥಾನ ಮತ್ತು ಹಿರೇ ಇಂಡಿ ದೇವಸ್ಥಾನದಲ್ಲಿ ಜರುಗುವ ಮತ್ತು ಮಂಗಲ ಕಾರ್ಯಾಲಯದಲ್ಲಿ ಜರುಗುವ ಲಗ್ನ,ನಿಸ್ಚಿತಾರ್ಥ, ಶ್ರೀಮಂತ ಹಾಗೂ ಇನ್ನಿತರ ಕಾರ್ಯಕ್ರಮಗಳ ನವೆಂಬರ್ ೨೦೨೧ ರಿಂದ ಡಿಶೇಂಬರ್ ೨೦೨೩ ರ ವರೆಗೆ ಲೆಕ್ಕ ನೀಡಬೇಕು.
ದೇವಸ್ಥಾನದಲ್ಲಿ ಇರುವ ಒಟ್ಟು ಬಂಗಾರ ಮತ್ತು ಬೆಳ್ಳಿ ಲೆಕ್ಕ ಕೊಡುವದು,೨೦೨೨ ಮತ್ತು ೨೩ ರಲ್ಲಿ ಡಿಸೆಂಬರ್ ತಿಂಗಳಲ್ಲಿ ಜರುಗಿದ ಪ್ರವಚನ ಕಾರ್ಯಕ್ರಮದಲ್ಲಿ ಕೂಡಿರುವ ಭಕ್ತರು ಕೊಟ್ಟ ಬಂಗಾರ ಮತ್ತು ಹಣದ ವಿವಿರ ನೀಡುವದು,
ರುದ್ರಾಭಿಷೇಕಕ್ಕೆ ಒಟ್ಟು ಸದಸ್ಯರ ಸಂಖ್ಯೆ ೫೯೪ಇದ್ದು ಪ್ರತಿಯೊಬ್ಬರಿಗೆ ರೂ ೧೦೦೧ ರಂತೆ ಹಣ ಸಂಗ್ರಹಣೆ ಮಾಡಿದ ೫ ಲಕ್ಷ ೯೪ ಸಾವಿರ ರೂ ಹಣ ಮತ್ತು ಅರ್ಚಕರ ಕಡೆಯಿಂದ ಪಡೆಯುವ ಪ್ರತಿ ವರ್ಷ ರೂ ೬೫ ಸಾವಿರ ಒಟ್ಟು ೫ ಲಕ್ಷ ೮೫ ಸಾವಿರ ಹಣ , ಅಗಸ್ಟ ಸಪ್ಟೆಂಬರ ತಿಂಗಳಲ್ಲಿ ೨೦೨೩ ರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರೂ ೨೧ ಲಕ್ಷ ಹಣ ಉಳಿದ ಬಗ್ಗೆ ಮಾತನಾಡಿದ್ದು ಸದರಿ ಹಣ ಯಾವ ಖಾತೆ ಮತ್ತು ಯಾವ ಬ್ಯಾಂಕಿನಲ್ಲಿ ಇದೆ.
ಈಗ ಕಮೀಟಿಯಲ್ಲಿ ಇರುವ ಸಕ್ರೀಯ ಸದಸ್ಯರ ಸಂಖ್ಯೆ ಎಷ್ಟು,ಹೊಸ ಕಮೀಟಿಯಲ್ಲಿ ಎಷ್ಟು ಸದಸ್ಯರ ಅವಶ್ಯಕತೆ ಇದೆ, ಅಷ್ಟು ಸದಸ್ಯರನ್ನು ದೇವಸ್ಥಾನದಲ್ಲಿ ಎಲ್ಲರ ಸಮ್ಮುಖದಲ್ಲಿ ಆಯ್ಕೆ ಮಾಡಬೇಕು. ಹಿಂದೆ ಆಗಿ ಹೋದ ಸದಸ್ಯರ ಮಕ್ಕಳನ್ನು ಅಥವಾ ಅವರ ಸಂಬAದಿತರನ್ನು ತೆಗೆದುಕೊಳ್ಳಬಾರದು, ತೆಗೆದುಕೊಂಡರೆ ಅನುಚಿತವಾಗುತ್ತದೆ.
ಈ ಹಿಂದೆ ಸಿಂಡಿಕೇಟ ಬ್ಯಾಂಕಗೆ ಬಾಡಿಗೆ ನೀಡಿದ ಕಟ್ಟಡ ಹಾಗೇಯೇ ಉಳಿದಿದೆ. ಅದರಿಂದ ಸಮೀತಿಗೆ ರೂ ೫೦ ಲಕ್ಷ ನಷ್ಟ ವಾಗಿದೆ. ಬೇಗನೆ ಬಾಡಿಗೆ ಬರುವಂತೆ ಏನಾದರೂ ಮಾಡಬೇಕು. ದೇವಸ್ಥಾನದಲ್ಲಿ ಸಿಸಿ ಕ್ಯಾಮೇರಾ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಇವರಿಗೆ ಸಲ್ಲಿಸಿದರು.
ಒಂದು ವೇಳೆ ೧೫ ದಿನಗಳ ವರೆಗೆ ಎಲ್ಲ ವಿವರ ಮತ್ತು ಲೆಕ್ಕ ಪತ್ರ ನೀಡದಿದ್ದಲ್ಲಿ ದೇವಸ್ಥಾನದ ಮುಂದೆ ಧರಣ ನಡೆಸಲಾಗುವದೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಶಂಕರಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ,ನ್ಯಾಯವಾದಿ ರಮೇಶ ಕುಲಕಣ ð, ಮಲ್ಲಪ್ಪ ಹದಗಲ್ಲ, ಸಾತಪ್ಪ ತೆನೆಹಳ್ಳಿ, ಮಹಾದೇವ ಬಾರಿಕಾಯಿ, ಚೆನ್ನಪ್ಪಬೋಡಿ, ಸತೀಶ ಕುಂಬಾರ, ಮಲ್ಕುಕಮತಿ, ಕಿರಣ ಕಡ್ಲೇವಾಡ, ಚೆನ್ನಪ್ಪ ಪಾಟೀಲ, ರವಿಗೌಡ ಪಾಟೀಲ, ಹಾಗೂ ಶ್ರೀ ಶಾಂತೇಶ್ವರ ಸದ್ಭಕ್ತರು ಭಾಗವಹಿಸಿದ್ದರು.
ಇಂಡಿ ಪಟ್ಟಣದ ಸಾರ್ವಜನಿಕರು ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಲೆಕ್ಕ ಪತ್ರ ಆಗ್ರಹಿಸಿ ಕಾಸುಗೌಡ ಬಿರಾದಾರ ಇವರಿಗೆ ಮನವಿ ಸಲ್ಲಿಸಿದರು.