ರಾಯಚೂರು: ಪುಂಡರ ತಂಡ ಸರ್ಕಾರಿ ಶಾಲೆಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿ ವಿಕೃತಿ ಮೆರೆದಿರುವ ಘಟನೆ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಬೇಗ ಮುರಿದು ನುಗ್ಗಿರುವ ದುರುಳರು ಎಲ್ಲಾ ದಾಖಲಾತಿಗಳನ್ನು ಚೆಲ್ಲಾಪಿಲ್ಲಿಯಾಗಿ ಬೀಸಾಡಿದ್ದಾರೆ. ನಂತರ ಅಡುಗೆ ಕೋಣೆಗೆ ನುಗ್ಗಿ ಅಲ್ಲಿದ್ದ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಸೇರಿದಂತೆ ಅಡುಗೆಗೆ ಬಳಸುವ ಎಣ್ಣೆ ಇನ್ನಿತರ ಎಲ್ಲಾ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.ಅಷ್ಟಕ್ಕೂ ಸುಮ್ಮನಾಗದ ಪುಂಡರು, ಶಾಲಾ ದಾಖಲಾತಿಗಳ ಮೇಲೆ ಮದ್ಯದ ಪೌಚ್ ಇಟ್ಟು ವಿಕೃತಿ ಮೆರೆದಿದ್ದಾರೆ. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್ಗಳು, ಮಾಂಸದ ತುಂಡುಗಳನ್ನ ಇಟ್ಟು ಅಟ್ಟಹಾಸಗೈದಿದ್ದಾರೆ. ಪ್ರಕರಣ ಸಂಬಂಧ ಮುಖ್ಯಗುರುಗಳು ಮಾನ್ವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.