ರಾಯಚೂರು: ಮಕ್ಕಳ ಕಲಿಕೆಗೆ ಚೈಲ್ಡ್ ಫಂಡ್ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಡಿಡಿಪಿಯು ರುಷಬೇಂದ್ರಯ್ಯ ಸ್ವಾಮಿ ಹೇಳಿದರು.ನಗರದ ಪವನ್ ಮೆನ್ಷನ್ ಹೋಟೆಲ್ನಲ್ಲಿ ಫಂಡ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಶಾಲಾಗಳಿಗೆ ಕಂಪ್ಯೂಟರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಸಂಸ್ಥೆಯವರು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿತಿರುವುದು ಶ್ಲಾಘನೀಯ ಎಂದರು.ನಂತರ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ಏಷ್ಯ ಖಂಡದಲ್ಲಿಯೇ ಹಿಂದುಳಿದ ದೇವದುರ್ಗ ತಾಲೂಕಿನ ವೈದ್ಯಕೀಯ ಸೇವೆಯಲ್ಲಿ ಚೈಲ್ಡ್ ಫಂಡ್ ಸಂಸ್ಥೆ ಕೊಡುಗೆ ತುಂಬಾ ಇದೆ. ಕೊರೋನ ಲಸಿಕೆ ಹಾಕಿಸುವಲ್ಲಿ ಮತ್ತು ಆಕ್ಸಿಜೆನ್ ಪ್ಲಾಂಟ್ಗಳು ಕೊಡುವಲ್ಲಿ ಅಗ್ರಗಣ್ಯ ಸೇವೆ ಮಾಡುತ್ತಿದ್ದು, ಈ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.ಡಿಸಿಪಿಓ ಮಾತನಾಡಿ,ಬಾಲ್ಯ ವಿವಾಹ ಮತ್ತು ಕಾರ್ಮಿಕ ಪದ್ಧತಿ ತಡೆಯುವಲ್ಲಿ ಚೈಲ್ಡ್ ಫಂಡ್ ಸೇವೆ ಅಮೂಲ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಶಾಲಾಗಳಿಗೆ ಕಂಪ್ಯೂಟರ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಇಂದಿರಾ, ಚೈಲ್ಡ್ ಫಂಡ್ ನ ಪ್ರೋಗ್ರಾಮ್ ಅಧಿಕಾರಿ ಅನಿಲ್ ಕುಮಾರ್, ತಾಲೂಕ ಮತ್ತು ಜಿಲ್ಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು ಸೇರಿದಂತೆ ಚೈಲ್ಡ್ ಫಂಡ್ ಸದಸ್ಯರು ಉಪಸ್ಥಿತರಿದ್ದರು.