ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಹೊರವಲಯದ ಆಲಿಮಟ್ಟಿ ರಸ್ತೆಯ ಹಡಲಗೇರಿ ಸೀಮೆಯಲ್ಲಿ ಹತ್ತಿರ ಬರುವ ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಶಕುಂತಲಾ ಬೆಳ್ಳಿ ಹಾಗೂ ವಿಕ್ರಾಂತ ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲಾ ಹನುಮಸಾಗರ ಪಟ್ಟಣದ ಶ್ರೀ ಅಭಿನವ ತಿರುಪತಿ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಿದ್ದ 11 ನೇ ರಾಜ್ಯ ಪೆಂಕಾಕ್ ಸಿಲಾಸ್ ಕ್ರೀಡಾಕೂಟದಲ್ಲಿ ಕ್ರೀಡಾ ಪಟುಗಳಾದ ಶಕುಂತಲಾ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ )25 ರಿಂದ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ವಿಕ್ರಾಂತ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ ) 20 ರಿಂದ 25 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ ಎಂದು ತರಬೇತಿದಾರ ಶಿವಕುಮಾರ ಶಾರದಳ್ಳಿ ತಿಳಿಸಿದರು.
ಇದೇ ವೇಳೆ ಟೂರ್ನಿಯ ಆಯೋಜಕರು ಐಪಿಎಸ್ ಎಫ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ , ಐಪಿಎಸ್ ಎಫ್ ಉಪಾಧ್ಯಕ್ಷ ವಿಜಯ ಹಂಚನಾಳ ಸೇರಿ ಟೂರ್ನಿಯಲ್ಲಿ ಉಪಸ್ಥಿತರಿದ್ದ ಮುಖಂಡರ ಸಮ್ಮುಖದಲ್ಲಿ ವಿಜೇತ ಕ್ರೀಡಾ ಪಟುಗಳಿಗೆ ಮೆಡಲ್ ಹಾಗೂ ಪ್ರಮಾಣ ಪತ್ರ ವಿತರಿಸಿ ಶುಭಹಾರೈಸಿದರು. ಟೂರ್ನಿಯಲ್ಲಿ ಪದಕ ವಿಜೇತರಾಗಿರುವ ಶಕುಂತಲಾ ಹಾಗೂ ವಿಕ್ರಾಂತನ ಸಾಧನೆಗೆ ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷರ ಮಾಂತಗೌಡ ಬಿರಾದಾರ ಪ್ರಾಚಾರ್ಯರು ಶ್ರೀಮತಿ,ಸುಪರ್ಣದಾಸ್ , ಕಾರ್ಯದರ್ಶಿ, ಶ್ರೀಮತಿ ಆದಮ್ಮ ಎಸ್ ಬಿರಾದಾರ. ಬಿಎಎಸ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ, ಬಿಎಎಸ್ ಅಂತರಾಷ್ಟ್ರೀಯ ಶಾಲೆ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು,ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.