• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮದುವೆಯಾದ ನವಜೋಡಿಗಳು ಮದ್ಯಪಾನದಂತಹ ಕೆಟ್ಟ ವ್ಯಸನಗಳಿಂದ ದೂರ ಇರಬೇಕು : ಶಾಸಕ ನಾಡಗೌಡ

    ಮದುವೆಯಾದ ನವಜೋಡಿಗಳು ಮದ್ಯಪಾನದಂತಹ ಕೆಟ್ಟ ವ್ಯಸನಗಳಿಂದ ದೂರ ಇರಬೇಕು : ಶಾಸಕ ನಾಡಗೌಡ

    ಅದ್ಧೂರಿಯಾಗಿ ಮದುವೆ ಮಾಡುವ ಬದಲು, ಅದೇ ಹಣದಲ್ಲಿ ನೂರಾರು ಬಡವರ ಮಕ್ಕಳ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು,”

    ಅದ್ಧೂರಿಯಾಗಿ ಮದುವೆ ಮಾಡುವ ಬದಲು, ಅದೇ ಹಣದಲ್ಲಿ ನೂರಾರು ಬಡವರ ಮಕ್ಕಳ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು,”

    ಮುದ್ದೇಬಿಹಾಳ: ‘ಅಪ್ಪಾಜಿ ಫೈನಾನ್ಸ್’ ಸಂಸ್ಥೆಗೆ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಚಾಲನೆ

    ಮುದ್ದೇಬಿಹಾಳ: ‘ಅಪ್ಪಾಜಿ ಫೈನಾನ್ಸ್’ ಸಂಸ್ಥೆಗೆ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಚಾಲನೆ

    ಖಿಲಾರಹಟ್ಟಿ ಗ್ರಾಮದ ಅಧಿದೇವತೆ ‘ಶ್ರೀ ಮನ್ನಿರೇಶ್ವರ’ ಇತಿಹಾಸ ಕೃತಿ ಲೋಕಾರ್ಪಣೆ

    ಖಿಲಾರಹಟ್ಟಿ ಗ್ರಾಮದ ಅಧಿದೇವತೆ ‘ಶ್ರೀ ಮನ್ನಿರೇಶ್ವರ’ ಇತಿಹಾಸ ಕೃತಿ ಲೋಕಾರ್ಪಣೆ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮುದ್ದೇಬಿಹಾಳ‌ ಶಾಸಕರ ಆಡಳಿತ ವೈಫಲ್ಯಗಳ ವಿರುದ್ಧ ತೀವ್ರ ಟೀಕೆ..! ಎ.ಎಸ್. ಪಾಟೀಲ (ನಡಹಳ್ಳಿ)

      Voiceofjanata.in

      February 4, 2026
      0
      ಮುದ್ದೇಬಿಹಾಳ‌ ಶಾಸಕರ ಆಡಳಿತ ವೈಫಲ್ಯಗಳ ವಿರುದ್ಧ ತೀವ್ರ ಟೀಕೆ..! ಎ.ಎಸ್. ಪಾಟೀಲ (ನಡಹಳ್ಳಿ)
      0
      SHARES
      66
      VIEWS
      Share on FacebookShare on TwitterShare on whatsappShare on telegramShare on Mail

      ಮುದ್ದೇಬಿಹಾಳ‌ ಶಾಸಕರ ಆಡಳಿತ ವೈಫಲ್ಯಗಳ ವಿರುದ್ಧ ತೀವ್ರ ಟೀಕೆ..! ಎ.ಎಸ್. ಪಾಟೀಲ (ನಡಹಳ್ಳಿ)

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ : ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ, ಇಡೀ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೂ ಮುದ್ದೇಬಿಹಾಳ ತಾಲ್ಲೂಕು ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿರುವುದು ಅತ್ಯಂತ ದುರಂತಕರ ಸಂಗತಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ,  ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಆಕ್ರೋಶ ವ್ಯಕ್ತಪಡಿಸಿದರು.
      ಪಟ್ಟಣದ ತಮ್ಮ ದಾಸೋಹ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಒಂಬತ್ತು ಬಾರಿ ಬಜೆಟ್ ಮಂಡನೆ ಮಾಡಿದ ದೇಶದ ಮೊದಲ ಮಹಿಳೆಯಾಗಿದ್ದು, ಈ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ಆಗಿದೆ ಎಂದು ಹೇಳಿದರು. ಉದ್ಯೋಗಿಯಾಗಬೇಡ, ಉದ್ಯಮಿಯಾಗು ಎನ್ನುವ ಮಂತ್ರವನ್ನು ಸಾರುವ ಬಜೆಟ್ ಇದಾಗಿದ್ದು, ಇದು ದೇಶಪ್ರೇಮಿಗಳಿಗೆ ಮಾತ್ರ ಅರ್ಥವಾಗುತ್ತದೆ. ಕಾಂಗ್ರೆಸ್ ನಾಯಕರಿಗೆ ಈ ಬಜೆಟ್ ಅರ್ಥವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
      ಹಿಂದೆ ಯುವಕರು ದುಡಿದು ಸರ್ಕಾರಿ ಅಥವಾ ಅರೆಸರ್ಕಾರಿ ಉದ್ಯೋಗ ಪಡೆಯಲು ಶಿಕ್ಷಣ ಕಲಿಯುತ್ತಿದ್ದರು. ಆದರೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೇಶಭಕ್ತಿಯ ಪರಿಣಾಮವಾಗಿ ಯುವಕರು ದೇಶಪ್ರೇಮದ ಜೊತೆಗೆ ಉದ್ಯಮದತ್ತ ಮುಖ ಮಾಡಿದ್ದಾರೆ ಎಂದು ಹೇಳಿದರು.
      ಇದೇ ವೇಳೆ ತಾಲ್ಲೂಕಿನ ಸದ್ಯದ ದುಸ್ಥಿತಿ, ಮೂಲಸೌಕರ್ಯಗಳ ಕೊರತೆ ಹಾಗೂ ಹಾಲಿ ಶಾಸಕರ ಆಡಳಿತ ವೈಫಲ್ಯಗಳ ವಿರುದ್ಧ ತೀವ್ರ ಟೀಕೆ ನಡೆಸಿದರು.
      ನಂಜುಂಡಪ್ಪ ಹಾಗೂ ಗೋವಿಂದರಾಜ ವರದಿಗಳ ಪ್ರಕಾರ ಮುದ್ದೇಬಿಹಾಳ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ವರದಿಗಳನ್ನು ಆಧಾರವಾಗಿಸಿಕೊಂಡು ಹೆಚ್ಚಿನ ಅನುದಾನ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ತರಬೇಕಾಗಿತ್ತು. ಆದರೆ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರು ಕ್ಷೇತ್ರದ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ. ಒಂದು ಕೋಟಿ ರೂಪಾಯಿ ಅನುದಾನವೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಬಿಡುಗಡೆ ಮಾಡಿದ್ದರೆ ಅದರ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲಿ ಎಂದು ನಡಹಳ್ಳಿಯವರು ಸವಾಲು ಹಾಕಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಾಲಿ ಶಾಸಕರಲ್ಲಿ ದೂರದೃಷ್ಟಿ ಮತ್ತು ಪ್ರಾಮಾಣಿಕ ಪ್ರಯತ್ನಗಳ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು.
      ಮುದ್ದೇಬಿಹಾಳ ಕ್ಷೇತ್ರದಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ನೀಡಿ ಲೂಟಿ ಮಾಡಲಾಗುತ್ತಿದೆ , ತಮ್ಮ ಶಾಸಕತ್ವದ ಅವಧಿಯಲ್ಲಿ ಲ್ಯಾಂಡ್ ಆರ್ಮಿಗೆ ಯಾವುದೇ ಕಾಮಗಾರಿ ನೀಡಿಲ್ಲ ಎಂದು ತಿಳಿಸಿದ ಅವರು, ಈಗ ಎಲ್ಲಾ ಕೆಲಸಗಳು ಸುರೇಶ್ ನಾಡಗೌಡ ಅವರ ಆಪ್ತರ ಮೂಲಕವೇ ನಡೆಯುತ್ತಿದ್ದು, ಸಾರ್ವಜನಿಕ ಹಣ ಲೂಟಿಯಾಗುತ್ತಿದೆ,  ತಮ್ಮ ಅವಧಿಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದರು. ಆದರೆ ಈಗ ಆ ಗುತ್ತಿಗೆದಾರರು ಎಲ್ಲಿಗೆ ಮಾಯವಾದರು ಎಂದು ಪ್ರಶ್ನಿಸಿದರು.
      ಇದಲ್ಲದೆ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ನ್ಯಾಯ ಸಿಗದಂತಾಗಿದೆ. ಆಡಳಿತ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ದಿನೇದಿನೇ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಪಟ್ಟಣದ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.  ಮುಖ್ಯ ರಸ್ತೆಗಳನ್ನು ಸಿಮೆಂಟ್ ರಸ್ತೆ ಮಾಡಿದ್ದೇ ನಾನು , ವ್ಯಾಪಾರಸ್ಥರು ದೂಳು ಸೇವನೆ ಮಾಡುತ್ತಾ ವ್ಯಾಪಾರ ಮಾಡುತ್ತಿದ್ದರು, ಇದಕ್ಕೆ  ಅವರೇ ಉತ್ತರಿಸಬೇಕು ಎಂದು ಹೇಳಿದರು.
      ನಾಗರಬೆಟ್ಟದ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದ್ದು, ರೈತರು ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದೆ. ಈಗಿನ ಶಾಸಕರು ಢವಳಗಿ ಕೆರೆಯನ್ನು ತುಂಬಿಸಿ ಕಾರ್ಯನಿಷ್ಠೆ ತೋರಿಸಲಿ ಎಂದು ಸವಾಲು ಹಾಕಿದರು.
      ಮುಸ್ಲಿಂ ಸಮುದಾಯದವರು ಮತ ಹಾಕದಿದ್ದರೂ ತಾವು ಅವರಿಗೆ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ನಡಹಳ್ಳಿಯವರು, ಉರ್ದು ಶಾಲೆಗೆ 60 ಲಕ್ಷ ರೂ. ಅನುದಾನ ನೀಡಿದ್ದುದನ್ನು ಹಾಗೂ ಮುದ್ದೇಬಿಹಾಳ, ನಾಲತವಾಡ ಅಂಬೇಡ್ಕರ್ ಸರ್ಕಲ್ ಮತ್ತು ತಾಳಿಕೋಟಿ ಬಸವೇಶ್ವರ ಸರ್ಕಲ್ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಶ್ರಮಿಸಿದ್ದುದನ್ನು ಸ್ಮರಿಸಿದರು. ಆದರೆ ಈಗಿನ ಕಾಂಗ್ರೆಸ್ ನಾಯಕರು ಕೇವಲ ಜಾತಿ-ಧರ್ಮದ ಹೆಸರಿನಲ್ಲಿ ಮತ ಪಡೆದು ಜನರನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.
      ಮುದ್ದೇಬಿಹಾಳದ ಕ್ರೀಡಾಂಗಣಕ್ಕೆ 2 ಕೋಟಿ 50 ಲಕ್ಷ ರೂ., ಶಾಲಾ ಕಟ್ಟಡಗಳಿಗೆ 1 ಕೋಟಿ 50 ಲಕ್ಷ ರೂ. ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳಿಗೆ ತಾವು ಅನುದಾನ ನೀಡಿದ್ದೇನೆ ಎಂದು ಹೇಳಿದರು. ಮುಸ್ಲಿಂ ಸಮುದಾಯದವರು ಮತ ಹಾಕಿದವರಿಗೆ ಕೊರಳುಪಟ್ಟಿ ಹಿಡಿದು ಅಭಿವೃದ್ಧಿಯನ್ನು ಕೇಳಲಿ ಎಂದು ಕಿಡಿಕಾರಿದರು.
      ಈ ಬಾರಿ ಮುದ್ದೇಬಿಹಾಳದ ಜನತೆ ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿ ಮಾಡದ ನಾಯಕರನ್ನು ಪ್ರಶ್ನಿಸುವ ಕಾಲ ಬಂದಿದೆ ಎಂದು ನೇರ ಸವಾಲು ಹಾಕಿದ ಅವರು, ತಮ್ಮ ಶಾಸಕತ್ವದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಓಣಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವುದಾಗಿ ತಿಳಿಸಿದರು.
      ಈ ಸಂಧರ್ಭದಲ್ಲಿ ಪ್ರಭು ಕಡಿ,ಸಂಜು ಬಾಗೇವಾಡಿ,  ಪರಶರಾಮ ನಾಲತವಾಡ, ಗೀರಿಶಗೌಡ  ಪಾಟೀಲ್,ಮದನಸ್ವಾಮಿ ಹೀರೆಮಠ,ಸಂಗನಗೌಡ ಪಾಟೀಲ್, ಅಶೋಕ ಚಿನಿವಾರ,ಬಸಯ್ಯಾ ನಂದಿಕೇಶ್ವರಮಠ, ಹುಲಗೇಪ್ಪ ಕಿಲ್ಲಾರಹಟ್ಟಿ,ನಾಗೇಶ ಕವಡಿಮಟ್ಟಿ, ಪುನಿತ್ ಹಿಪ್ಪರಗಿ,ನೀಖಿಲ್ ಮಲಗಲದಿನ್ನಿ, ಶಿವು ಬಿರಾದಾರ,ಅನೀಲ ರಾಠೋಡ,ಶಿವು ಲದ್ದಿಮಠ,ವಿರೇಶ ದೇಸಾಯಿ ಕೇಖಾ ಕೊಂಡಗೂಳಿ, ಗೌರಮ್ಮ ಹುನಗುಂದ,ಪಾರ್ವತಿ ಕಂಬಾರ, ಪ್ರೀತಿ ಕಂಬಾರ ಸೇರಿದಂತೆ  ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
      Tags: #indi / vijayapur#Public News#Severe criticism against the administrative failures of Muddebihal MLAs..! A.S. Patil (Nadahalli)#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಮುದ್ದೇಬಿಹಾಳ‌ ಶಾಸಕರ ಆಡಳಿತ ವೈಫಲ್ಯಗಳ ವಿರುದ್ಧ ತೀವ್ರ ಟೀಕೆ..! ಎ.ಎಸ್. ಪಾಟೀಲ (ನಡಹಳ್ಳಿ)
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಸ್ವಚ್ಛತೆ ಎನ್ನುವುದು ಕೇವಲ‌ ಪೌರ ಕಾರ್ಮಿಕರ ಕೆಲಸವಲ್ಲ..!

      ಸ್ವಚ್ಛತೆ ಎನ್ನುವುದು ಕೇವಲ‌ ಪೌರ ಕಾರ್ಮಿಕರ ಕೆಲಸವಲ್ಲ..!

      0
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಸ್ವಚ್ಛತೆ ಎನ್ನುವುದು ಕೇವಲ‌ ಪೌರ ಕಾರ್ಮಿಕರ ಕೆಲಸವಲ್ಲ..!

      ಸ್ವಚ್ಛತೆ ಎನ್ನುವುದು ಕೇವಲ‌ ಪೌರ ಕಾರ್ಮಿಕರ ಕೆಲಸವಲ್ಲ..!

      March 22, 2026
      ಬಿದರಕುಂದಿಯಲ್ಲಿ ಭಕ್ತಿ-ಸೌಹಾರ್ದತೆಯ ನಡುವೆ ರಮಜಾನ್ ಹಬ್ಬ ಸಂಭ್ರಮಾಚರಣೆ

      ಬಿದರಕುಂದಿಯಲ್ಲಿ ಭಕ್ತಿ-ಸೌಹಾರ್ದತೆಯ ನಡುವೆ ರಮಜಾನ್ ಹಬ್ಬ ಸಂಭ್ರಮಾಚರಣೆ

      March 21, 2026
      ಈದ್ ಹಬ್ಬದ ಸಂದೇಶ: ಪ್ರೀತಿ, ಸಹೋದರತ್ವ ಮತ್ತು ಸಮಾಜದ ಪ್ರಗತಿ

      ಈದ್ ಹಬ್ಬದ ಸಂದೇಶ: ಪ್ರೀತಿ, ಸಹೋದರತ್ವ ಮತ್ತು ಸಮಾಜದ ಪ್ರಗತಿ

      March 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.