ಈ ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಸೇವೆ ಅನನ್ಯ: ಶಾಸಕ ಎಮ್ ಆರ್ ಮಂಜುನಾಥ್
ಹನೂರು: ಸರ್ವ ಶ್ರೇಷ್ಠ ಚಿಂತಕರು ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಆದರ್ಶವಾದಿ ತತ್ವಜ್ಞಾನಿಗಳ ಚಿಂತನೆಯನ್ನು ಭಾರತೀಯ ಚಿಂತನೆಗೆ ಪರಿಚಿಸಿದವರು. ಅವರು ಪ್ರಸಿದ್ಧ ಶಿಕ್ಷಕರಾಗಿದ್ದರು ಅವರ ಜನ್ಮ ದಿನವನ್ನು ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಎಂಆರ್ ಮಂಜುನಾಥ್ ರವರು ತಿಳಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಸಕ ಎಂಆರ್ ಮಂಜುನಾಥ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮುಮ್ತಾಜ್ ಬೇಗಂ ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂಆರ್ ಮಂಜುನಾಥ ಆದರ್ಶ ಶಿಕ್ಷಕರಾಗಿ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ನೆನೆಯಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದವರು. ಸಮಾಜ ನಿರ್ಮಾಣ ಮಾಡುವ ಕಾರ್ಯಗಳಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಯಾವುದೇ ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕರಾಗಿರುತ್ತಾರೆ. ಶಿಕ್ಷಕರನ್ನು ನಾವು ಯಾವ ಸಂದರ್ಭದಲ್ಲಿ ಮರೆಯಬಾರದು. ಶಾಲೆಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುತ್ತೇನೆ. ಗುಡ್ಡಗಾಡು ಪ್ರದೇಶಗಳಲ್ಲಿನ ಶಿಕ್ಷಕರ ಸೇವೆ ಅನನ್ಯವಾದದ್ದು. ಪ್ರತಿ ಶಾಲೆಗಳಿಗೂ ಭೇಟಿಕೊಟ್ಟು ಶಾಲೆಗೆ ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಮಾಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಯಾವುದೇ ಶಿಕ್ಷಕರ ಸಮಸ್ಯೆಗಳಿದ್ದರೂ ನಾನು ಬಗೆಹರಿಸಿಕೊಡುತ್ತೇನೆ. ನಿಮ್ಮ ಮನವಿ ಶಿಕ್ಷಕರ ಭವನ ನಿರ್ಮಾಣಕ್ಕೆ ತಹಸಿಲ್ದಾರ್ ಜೊತೆ ಮಾತನಾಡಿದ್ದು ಆದಷ್ಟು ಬೇಗ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಬಿ ಎಸ್ ವಿನಯ್ ರವರು ಮಾತನಾಡಿ ಹನೂರು ಭಾಗದಲ್ಲಿ ಸ್ವತಂತ್ರ ಪೂರ್ವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಿದ್ದರು ಎಂದು ಸಾಹಿತಿಗಳಾದ ಕೃಷ್ಣಮೂರ್ತಿ ರವರು ಹೇಳಿದ್ದಾರೆ. ಅಕ್ಷರವನ್ನು ಕಲಿಸಿದವರನ್ನೇ ಗುರು ಎಂದು ಕರೆಯುತ್ತೇವೆ, ಇಂದು ಜನ ಮಾನಸದಲ್ಲಿ ಶಿಕ್ಷಕರಗಳನ್ನು ಗುರುಗಳು ಎಂದು ಕರೆಯಲಾಗುತ್ತದೆ. ವಿದ್ಯೆಯಲ್ಲಿ ವಿನಯ ಹಾಗೂ ಸಮಾಜವನ್ನು ತಿದ್ದುವ ಹೊಣೆಗಾರಿಕೆ ಶಿಕ್ಷಕರಿಗೆ ಇರುತ್ತದೆ. ಅಂದು ಶಿಕ್ಷಕರಿಂದ ಕೋಲನ್ನು ಕಿತ್ತು ಕೊಳ್ಳಲಾಯಿತು, ಆವಾಗ ಪೊಲೀಸರ ಕೈಯಲ್ಲಿ ಕೋಲು ಹಿಡಿಯಬೇಕಾದ ಸಮಯ ಬಂದಿದೆ. ಈ ತಾಲೂಕಿನಲ್ಲಿ ಶಿಕ್ಷಕರು ತುಂಬಾ ದೂರ ಪ್ರಯಾಣ ಮಾಡಬೇಕು, ರಸ್ತೆ ಸರಿ ಇಲ್ಲ, ಬಸ್ ವ್ಯವಸ್ಥೆ ಇಲ್ಲ, ಕಾಡು ಪ್ರಾಣಿಗಳ ಹಾವಳಿ ಆದರೂ ಇದೆಲ್ಲವನ್ನು ದಾಟಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಶಿಕ್ಷಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ 2024 ರಲ್ಲಿ ನಿವೃತ್ತಗೊಂಡಂತಹ 20 ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ಅಮಲ್ ದಾಸ್, ನಾಗಣ್ಣ, ಮ್ಯಾಕ್ಸಿ ಗೋವಿಯಸ್, ನೀರೇಶ್, ಪಿ ತಮ್ಮಯ್ಯ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ವೆಂಕಟರಾಜು, ಕದರಯ್ಯ, ಬಾಬು, ತೋಮಿಯನ್, ರಾಜಮ್ಮ, ರತ್ನಮ್ಮ, ಶಾಂತಿ, ಪುಷ್ಪರಾಣಿ ,ನವಮಣಿ, ಮೇರಿ, ವಸಂತಕುಮಾರಿ, ನಟರಾಜು, ಪ್ರಸಾದ್, ಪಾಲಿನ್, ರಾಣಿ, ಶಿಕ್ಷಕರಿಗೆ ಶಾಸಕ ಎಂಆರ್ ಮಂಜುನಾಥ್ ರವರು ಸನ್ಮಾನಿಸಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಇಲಾಖೆಯ ವತಿಯಿಂದ ಶಿಕ್ಷಕರಿಗೆ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಕ್ರೀಡೆಯಲ್ಲಿ ಜಯಗಳಿಸಿದ ಶಿಕ್ಷಕರಿಗೆ ಬಹುಮಾನವನ್ನು ಶಾಸಕ ಎಂಆರ್ ಮಂಜುನಾಥ್ ರವರು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ತಹಸಿಲ್ದಾರ್ ವೈ ಕೆ ಗುರುಪ್ರಸಾದ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮುಮ್ತಾಜ್ ಬೇಗಮ್, ಪಟ್ಟಣ ಪಂಚಾಯತಿ ಸದಸ್ಯರಾದ ಮಹೇಶ್, ಹರೀಶ್, ಸಂಪತ್, ಶ್ರೀಮತಿ ಪವಿತ್ರ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಜೆಸ್ಸಿಂ ಪಾಶ, ಜಿಲ್ಲಾ ಯೋಜನಾ ಸಹಾಯಕ ನಿರ್ದೇಶಕರಾದ ನಾಗೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜು,ಕ.ರಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಕೃಷ್ಣೇಗೌಡ, ಶಿಕ್ಷಕರಾದ ಮಹದೇವ್, ಚಿನ್ನ ಪೇಯ, ಮಹೇಶ್ ,ಅಶೋಕ್, ರಮೇಶ್ ಹಾಗೂ ಶಿಕ್ಷಕ ವೃಂದದವರು ಮತ್ತು ಹಲವು ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ