ಪ್ರವಚನ ಸುದ್ದಿ
ನಮ್ಮ ಜೀವನ ದೇವರ ಕೊಡುಗೆ
ಅಮೃತಾನಂದ ಶ್ರೀಗಳು
ಇಂಡಿ : ಎಲ್ಲ ಋಷಿಗಳು ಸಂತರು ಶರಣರು ಹೇಳಿದ್ದಾರೆ.ನಮ್ಮ ಜೀವನ ದೇವರ ಕೊಟ್ಟ ಕೊಡುಗೆ. ಜೀವನ ಸಮೃದ್ದಿ, ಪಾವನ ಗೊಳಿಸಬೇಕು. ಸಿಕ್ಕ ಅವಕಾಶ ಬಳಸಿಕೊಂಡು ಜೀವನ ಅನುಭವಿಸಬೇಕು. ಸತ್ಯವನ್ನು ಅರಿಯಬೇಕು.
ಯಾರು ಭೌತಿಕ ಜೀವನದಲ್ಲಿ ಅನುಭವ ಶ್ರೀಮಂತಿಕೆ ಸತ್ಯವನ್ನು ಅರಿಯುತ್ತಾರೆ ಅವರ ಜೀವನ ಪಾವನ. ಸುಂದರವಾದ ಶರೀರ ಕೊಟ್ಟಿದ್ದು ಸುಂದರವಾದ ಬದುಕು ಸಾಗಬೇಕು ಎಂದರು.
ಬದುಕನ್ನು ಅರಿತುಕೊಂಡು ಬದುಕಿನ ಮೌಲ್ಯ ಅರಿತುಕೋಂಡು ಬದುಕನ್ನು ಶ್ರೀಮಂತಗೊಳಿಸಬೇಕಾಗಿದೆ. ಹೊಲಸಿನಲ್ಲಿ ಹೂ ಬೆಳೆಯುತ್ತದೆ. ಹೂವಿಗೆ ಹಾಲು ಹಾಕುವದಿಲ್ಲ. ಕೊಳಚೆ ನೀರನ್ನು ಹಾಕುತ್ತೇವೆ ಆದರೂ ಹೂ ಸುಗಂಧ ವಾಸನೆ ನೀಡುತ್ತದೆ. ಅದರಂತೆ ನಮ್ಮ ಜೀವನ ಸುಗಂಧ ಶ್ರೀಮಂತಿಕೆಯಿAದ ಕೂಡಿರಬೇಕು. ಎಲ್ಲರಿಗೂ ಅವರವರ ಸಮಸ್ಯೆಗಳಿರುತ್ತವೆ. ನಮ್ಮರಿಗಾಗಿ ಕೆಲಸ ಮಾಡಬೇಕು, ನಮ್ಮ ನಿಮ್ಮ ಎನ್ನದೆ ಎಲ್ಲರಿಗಾಗಿ ಮತ್ತು ನಮ್ಮರಿಗಾಗಿ ಕೆಲಸ ಮಾಡಬೇಕು. ಆಗ ಕೆಲಸ ಸರಳವಾಗುತ್ತವೆ. ಕೆಲಸಗಳು ತಿಳಿದುಕೊಂಡು ಸಂತೋಷದಿAದ ಸಮೃದ್ದಿಗೋಳಿಸಬೇಕು.
ಮನುಷ್ಯರಿಗೆ ಚಿಂತೆ ಇರುತ್ತವೆ. ಮನೆಯಲ್ಲಿ ಒತ್ತಡದಿಂದ ಇರುವ ಬದಲಾಗಿ ಒತ್ತಡ ನಿರಾಸೆ ಬಿಟ್ಟು ಜೀವನ ತಿಳಿದುಕೊಂಡು ಉತ್ಸಾಹಿಗಳಾಗಿ ಕೆಲಸ ಮಾಡಬೇಕು ಎಂದರು.
ಹಿರಿಯದು ಕಿರಿಯದು ಮರೆತು ಕೆಲಸ ಮಾಡಬೇಕು. ಆಧ್ಯಾತ್ಮ ಎಲ್ಲ ವಿದ್ಯೆಗಳ ರಾಜ, ಆದ್ಯಾತ್ಮ ಪವಿತ್ರವಾಗಿದ್ದು ಪ್ರತ್ಯಕ್ಷ ಸಾದಿಸುವದರಿಂದ ಸುಖ ಪಡೆಯುತ್ತೇವೆ. ಅದೇ ಧರ್ಮ.
ದೊಡ್ಡ ಮನಸ್ಸಿನಿಂದ ಒಳ್ಳೆ ಆಲೋಚನೆ ಬರುತ್ತವೆ. ಸಣ್ಣ ಮನಸ್ಸು ಇನ್ನೊಬ್ಬರ ಬಗ್ಗೆಚಿಂತನೆ ಮಾಡುತ್ತದೆ. ದುಡಿಯುವದರಿಂದ ಶ್ರಮ ಮಾಡುವದರಿಂದ ಸಮಾಧಾನ ಸಿಗುತ್ತದೆ. ಜೀವನ ಸಮೃದ್ದಗೊಳ್ಳುತ್ತದೆ .ಚಿಂತೆಯ ಕಿಡಿ ದೊಡ್ಡ ಅರಣ್ಯ ಸುಡುತ್ತದೆ. ನಾಶ ಮಾಡುತ್ತದೆ. ನಮಗೆ ನಾವೇ ವೈರಿ, ಗುರು ಇದ್ದರೆ ಆಧ್ಯಾತ್ಮ. ಗುರು ನಮ್ಮನ್ನು ಸಾಮಾನ್ಯ ವ್ಯಕ್ತಿಯಿಂದ ಅಸಾಮಾನ್ಯ ವ್ಯಕ್ತಿಯಾಗಿ ಮಾಡುತ್ತಾನೆ ಎಂದರು..


















