ಹಿರಿಯ ಛಾಯಾಗ್ರಾಹಕ ಗುರುಸಿದ್ದಪ್ಪ ಬಿ ಎಲ್ ಡಿ ಆಸ್ಪತ್ರೆಗೆ ದೇಹದಾನ
ವಿಜಯಪುರ ಸೆ. 4: ಜಿಲ್ಲೆಯಲ್ಲಿ ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದು. ವಿಜಯಪುರ ಪಟ್ಟಣದ ನಿವಾಸಿಯಾದ ಗುರುಸಿದ್ದಪ್ಪ ಬಸಪ್ಪ ರುದ್ರಾಕ್ಷಿ (82) ನಿಧನರಾದ ಹಿನ್ನೆಲೆಯಲ್ಲಿ ಮೃತರ ಇಚ್ಚೆಯಂತೆ ಅವರ ದೇಹವನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಹಿರಿಯ ಛಾಯಾಗ್ರಾಹಕರಾಗಿದ್ದ ಗುರುಸಿದ್ದಪ್ಪ ಬಸಪ್ಪ ರುದ್ರಾಕ್ಷಿ ಅವರು ಸೆಪ್ಟೆಂಬರ್ 3 ರಂದು ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದರು. ಅವರ ಇಚ್ಛೆಯಂತೆ ಮೃತರ ಕುಟುಂಬಸ್ಥರು ಸೆಪ್ಟೆಂಬರ್ 4 ರಂದು ಬುಧವಾರ ಬಿ.ಎಲ್.ಡಿ.ಇ ಆಸ್ಪತ್ರೆಗೆ ದೇಹದಾನ ಮಾಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಅಂಗರಚನಾ ಶಾಸ್ತç ವಿಭಾಗದ ಬೋಧಕ ಸಿಬ್ಬಂದಿ ಡಾ. ಎಸ್. ವಿ. ಯಾತಗಿರಿ, ಡಾ. ಅಶ್ವಿನಿ ನುಚ್ಚಿ, ಡಾ. ವೀಣಾ ಹರವಾಳಕರ ಅವರು ಪಾರ್ಥಿವ ಶರೀರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು ಎಂದು ವಿಭಾಗದ ಮುಖ್ಯಸ್ಥ ಡಾ. ಆರ್. ಎಸ್. ಬುಳಗೌಡ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.