ಲಿಂಗಸೂಗೂರು: ಹರಿತವಾದ ಬರವಣಿಗೆ, ನೇರ ನಿಷ್ಠುರವಾದಿ, ವಿಪ್ರ ಸಮಾಜದ ಹಿರಿಯರು, ಚತುರ ಬರಹಗಾರರು. ಪತ್ರಿಕಾ ರಂಗದಲ್ಲಿ ವಿಶಿಷ್ಟ ಬರವಣಿಗೆಯ ಮೂಲಕ ಛಾಪು ಮೂಡಿಸಿದ ಹಿರಿಯ ಪತ್ರಕರ್ತರಾದ ಗುರುರಾಜ್ ಮುತಾಲಿಕ್ ಅವರ ಪತ್ರಿಕಾ ರಂಗದ ಸಾಧನೆಗೆ ಗೌರವ ಪೂರ್ವಕವಾಗಿ ಬಿಜೆಪಿ ಮಹಿಳಾ ಮುಖಂಡರಾದ ಜ್ಯೋತಿ ಸುಂಕದ ಅವರು ದಂಪತಿಗಳಿಗೆ ಸನ್ಮಾನಿಸಿ, ಗೌರವಿಸುವದರ ಮೂಲಕ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶೋಭಾ ಕಾಟಾವಾ, ಸ್ಮೀತಾ ಅಂಗಡಿ, ವೆಂಕೋಬ ಪವಾಡೆ, ರಮೇಶ್ ಉಳಿಮಸರು, ಗೋವಿಂದ ದೀನ ಸಮುದ್ರ, ನಿಂಗನಗೌಡ ಉಪಸ್ಥಿತರಿದ್ದರು.