ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀನಿವಾಸ ಎಚ್. ಬುದ್ರಾಪುರ ವಿಧಿವಶ..!
ಇಂಡಿ : ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀನಿವಾಸ ಎಚ್. ಬುದ್ರಾಪುರ (47) ಅಂಗಾಂಗ ವೈಫಲ್ಯ ದಿಂದ ಹೈದರಾಬಾದನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ , ಈರ್ವರು ಪುತ್ರರು, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅತ್ಯಕ್ರಿಯೆ ಅವರ ಸ್ವಗ್ರಾಮ ಇಲಕಲ್ಲದಲ್ಲಿ ಬುಧವಾರ ಸಾಯಂಕಾಲ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯುತ್ತದೆ. ಜೆಎಂಎಫ್ ಸಿ ಇಂಡಿ ನ್ಯಾಯಾಲಯದ ನ್ಯಾಯಾಧೀಶರು, ಹಾಗೂ ನ್ಯಾಯವಾದಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನ್ಯಾಯಾಧೀಶರಿಗೆ ಅಂತಿಮ ನಮನ ಸಲ್ಲಿಸುವರು.