ಮಕ್ಕಳಿಗೆ ಗುಣಾತ್ಮಕ ಹಾಗೂ ಸಂಸ್ಕಾರಯುತ್ ಶಿಕ್ಷಣ ನೀಡಬೇಕು
ನಾದ ಶಾಲೆಯಲ್ಲಿ “7ನೇ ವಗ೯ದ ಬೀಳ್ಕೊಡುವ ಸಮಾರಂಭ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾಯ೯ಕ್ರಮ.
ಇಂಡಿ : ಜೀವ ಜಗತ್ತಿನಲ್ಲಿ ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಸೃಜನ-ಶೀಲ ಜೀವಿ ಎಂದರೆ ಅದು ಮಾನವ ಮಾತ್ರ . ಮನುಷ್ಯ ಹಕ್ಕಿಯಂತೆ ಹಾರುವುದು, ಮೀನಿನಂತೆ ಈಜುವುದು ಕಲಿತ. ಕಲಿಕೆ ಎನ್ನುವುದು ಜನನದಿಂದ ಮರಣದವರೆಗೆ ಸತತವಾಗಿ ಯಾವುದೇ ರೀತಿಯ ಅನುಭವವೇ ಕಲಿಕೆ ಎಂದು ಸರಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್ ಡಿ ಪಾಟೀಲ ಹೇಳಿದರು.
ತಾಲೂಕಿನ ನಾದ ಬಿಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ,”7ನೇ ವಗ೯ದ ಬೀಳ್ಕೊಡುವ ಸಮಾರಂಭ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾಯ೯ಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಆದರೆ ಕಲಿವುವ ಅನುಭವದ ಹಂತಗಳು ಮರೆಯಬಾರದು. ವಿದ್ಯಾಥಿ೯ಗಳು ಶಿಕ್ಷಣದಲ್ಲಿ ಮುಂಬಡ್ತಿ ಹೊಂದಿ ಶಾಲೆಗೆ ಹಾಗೂ ಗ್ರಾಮದ ಹೆಸರು ಪಸರಿಸುವ ಜ್ಞಾನಿಗಳಂತೆ ವಿಜ್ಞಾನಿಗಳಾಗಬೇಕೆಂದು ಹೇಳಿದರು. ಶಿಲ್ಪಿ ತಾನು ವಿಕಾರವುಳ್ಳ ಕಲ್ಲು ಕಟೆದು ಒಳ್ಳೆಯ ಮೂತಿ೯ ಮಾಡುವಂತೆ , ಶಿಕ್ಷಕರು ವಿದ್ಯಾರ್ಥಿಗಳನ್ನು ಜೀವಂತ ಮೂರ್ತಿ ಮಾಡುವ ಶಿಲ್ಪಿಯಿದ್ದಂತೆ. ಅಂತಹ ಶಿಲ್ಪಿ ದೇಶದ ಕೀತಿ೯, ಮಕ್ಕಳಿಗೆ ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ಸಿಗಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆದು ಗುರಿ ಮುಟ್ಟುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.
ಶಿರಶ್ಯಾಡ ಗ್ರಾಮದ ಶಾಲೆಯ ಮುಖ್ಯಗುರು ಎಸ್ ಪೂಜಾರಿ ಮಾತಾನಾಡಿದ ಅವರು, ತಾಲೂಕಿನ ಕ್ಷೇತ್ರದಲ್ಲಿ ಅತೀ ಹೆಚ್ಚು ಸರ್ಕಾರಿ ನೌಕರಿ ಪಡೆದ ಕೀರ್ತಿ ನಾದ ಬಿಕೆ ಗ್ರಾಮಕ್ಕೆ ಸಲ್ಲುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ನಾದ ಬಿ ಕೆ ಗ್ರಾಮ ಎತ್ತಿದ ಕೈ. ಯಾರೂ ಮಕ್ಕಳಿಗಾಗಿ ಆಸ್ತಿ, ಅಂತಸ್ತು, ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿರಿ. ಅಷ್ಟೇ ಅಲ್ಲದೆ ಯಾವುದೇ ಒಂದು ಕಟ್ಟಡಕ್ಕೆ ತಳವಿನ್ಯಾಸ ನೀಲ ನಕ್ಷೆ ಎಷ್ಟು ಮುಖ್ಯವೋ ಅಷ್ಟೇ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪ್ರಮುಖ ತಳಪಾಯ.
ಶ್ರೀ ಸಿದ್ಧಾರೂಢ ಕೊಳ್ಳೂರ “ವಿಜ್ಞಾನ ವಸ್ತು ಪ್ರದರ್ಶನ” ಉದ್ಘಾಟನೆ ಮಾಡಿ, ನಂತರ ಮಾತನಾಡಿ- ಜಗತ್ತು ಪ್ರಗತಿ ಯಾಗುತ್ತಿರುವುದು ಶಿಕ್ಷಣದಿಂದ . ಶಿಕ್ಷಣದಲ್ಲಿ ಯಾವುದೇ ರೀತಿಯ ಭೇಧ-ಭಾವವಿಲ್ಲದೆ, ಶಿಕ್ಷಕರಿಗೆ, ಹಿರಿಯರಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅಹಂ ತೊರೆದು ಶಿಕ್ಷಣ ಪಡೆಯಬೇಕು. ಈ ವಿಜ್ಞಾನ ವಸ್ತು ಪ್ರದರ್ಶನದಂತೆ ವಿದ್ಯಾರ್ಥಿಗಳಾದ ತಾವು ಮುಂದೊಂದು ದಿನ ವಿಜ್ಞಾನಿಯಾಗಳಾಗಬೇಕೆಂದು ಹಿತನುಡಿ ಹೇಳಿದರು.
ವಿಶೇಷವಾಗಿ ಈ ಕಾಯ೯ಕ್ರಮದಲ್ಲಿ ತಾಲೂಕಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಶ್ರೀ ಅರವಿಂದಗೌಡ ಬಿರಾದಾರ (ಶಿರಶ್ಯಾಡ) ರೂಪಾ ಎಲ್ ಕೆ (ನಾದ ಬಿಕೆ) ಇವರಿಗೆ ಸನ್ಮಾನಿಸಿದರು.
ವೇದಿಕೆಯ ಮೇಲೆ ಶ್ರೀ ಧಮ೯ಗೌಡ ಸಿ ಅವಜಿ, ಸೋಮಯ್ಯ ಪಂ ಮಠಪತಿ, ಆಲಮೇಲ ಎ ಕೆ ನಂದಿ ಕಾಲೇಜಿನ ಪ್ರಾಚಾರ್ಯ ಶಿವಾನಂದ ಎಂ ಉಪ್ಪಾರ, ಸಿದ್ಧಾರೂಢ ಯ ಕೊಳ್ಳೂರ, ಸೋಮಶೇಖರ ಮ್ಯಾಕೇರಿ, ಎಸ್.ಎ.ಪೂಜಾರಿ,(ಮು.ಗು) ಎಸ್.ವ್ಹಿ.ಹರಳಯ್ಯ ಅಧ್ಯಕ್ಷರು ಫ್ರೌ.ಶಾ.ಶಿ.ಸಂ, ಮಲ್ಲಿಕಾರ್ಜುನ ನೇದಲಗಿ, ಬಿ ಎನ್ ಜಮಾದಾರ, ಪಿ ಎಮ್ ನಾದ, ಮುಖ್ಯಗುರು ಎಸ್ ಜೆ ಹಿಳ್ಳಿ,ಬಿ ಎಸ್ ಪಾಟೀಲ, ಎ ಬಿ ರವತಗಾಂವ(ಶಿಕ್ಷಕರು) ಜ್ಯೋತಿ ಪರಗೊಂಡ. ರೂಪಾ ಎಲ್ ಕೆ, ರಿಶಾಲದಾರ, ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.ಎಸ್.ಜೆ .ಹಿಳ್ಳಿ ಸ್ವಾಗತ ಹಾಗೂ ವಂದಿಸಿದರು. ಇನ್ನೂ ನಿರೂಪಣೆ ಎಸ್ ಎಮ್ ಕುಂಬಾರ ನಿರ್ವಹಿಸಿದರು.