ಅಫಜಲಪುರ: ಕಲಬುರಗಿ ಜಿಲ್ಲಾಧ್ಯಕ್ಷರಾದ ಧನರಾಜ ರಾಠೋಡ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಫಜಲಪುರ ತಾಲ್ಲೂಕಿನ ನೂತನ ಗೌರವ ಅಧ್ಯಕ್ಷರಾಗಿ ರವಿಕುಮಾರ್ ಬಡಿಗೇರ ಹಾಗೂ ಅಫಜಲಪುರ ತಾಲ್ಲೂಕಾ ಅಧ್ಯಕ್ಷರಾಗಿ ಶೈಲ್ ಸಿಂಗೆ ಆಯ್ಕೆಯಾಗಿದ್ದಾರೆ.
ಇನ್ನು ಅಫಜಲಪುರ ತಾಲೂಕಾ ಉಪಾಧ್ಯಕ್ಷರಾಗಿ ಉಮೇಶ ಅಚಲೇರಿ, ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಾಲಿಂಗ ಪೂಜಾರಿ, ಸಂಘಟನೆ ಕಾರ್ಯದರ್ಶಿಯಾಗಿ ರವಿ ಗುಂಡಗುರ್ತಿ, ಖಜಾಂಚಿಯಾಗಿ ಶ ರಾಹುಲ್ ಅಣ್ಣೆನವರ್ ಕಾರ್ಯದರ್ಶಿ ಹುಸೇನ್ ಸಾಬ್ ಮುಲ್ಲಾರನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರಾದ ಮಲ್ಲಿನಾಥ ಪೂಜಾರಿ, ಪ್ರಶಾಂತ ಮ್ಯಾಕೇರಿ, ಮಹೇಶ್ ವಿಶ್ವಕರ್ಮ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.