ತೊಗರಿ ನಾಡಿನ ವಿಭಾಗಿಯ ಸಂಚಾಲಕರಾಗಿ ಸಂಜೀವ ಜನ್ನ ಆಯ್ಕೆ
ಇಂಡಿ : ಕಲ್ಬುರ್ಗಿ ವಿಭಾಗಿಯ ಸಂಚಾಲಕರನ್ನಾಗಿ ಸಂಜೀವ ಜನ್ನಾ ಅವರನ್ನು ಅಯ್ಕೆ ಮಾಡಿ ರಾಜ್ಯಧ್ಯಕ್ಷ ಎಮ್ ಟಿ ಸುರೇಶ ಕಂಠಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಿ ಬೆಂಗಳೂರು, ಆಶ್ರಯದಲ್ಲಿ ಕಲ್ಬುರ್ಗಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮದ ವೇದಿಕೆ ರೂಪಿಸುವ, ಆಯೋಜಿಸುವ ಹಾಗೂ ಕಾರ್ಯಕರ್ತರ ನೇಮಕ ಮಾಡುವ ಜವಾಬ್ದಾರಿ ಈ ಆದೇಶ ಪತ್ರದ ಮೂಲಕ ನೀಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಧ್ಯಕ್ಷ ಎಮ್ ಟಿ ಸುರೇಶ್ ಕಂಠಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.