ಬಿರು ಬೇಸಿಗೆಯಲ್ಲಿ ಮುದ್ದೇಬಿಹಾಳ ಕ್ಷೇತ್ರದ ಪಟ್ಟಣ ಹಾಗೂ ಗ್ರಾಮೀಣ ಗ್ರಾಮದ ಜನತೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಅಧಿಕಾರಿಗಳಿಗೆ ಖಡಕ್ ಸೂಚನೆ.
ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿ ಕೊಳ್ಳಬೇಕು: ಶಾಸಕ ನಾಡಗೌಡ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಬಿರು ಬಿಸಿಲಿನಿಂದ ಬರುತ್ತಿರುವ ಮುದ್ದೇಬಿಹಾಳ ಕ್ಷೇತ್ರದ ಪಟ್ಟಣ ಹಾಗೂ ಗ್ರಾಮೀಣ ಗ್ರಾಮದ ಜನತೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ, ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿ ಕೊಳ್ಳಬೇಕು. ಇಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯ ವಿಲ್ಲ ಎಂದು ಅಂದುಕೊಂಡಿದ್ದರೆ ಅಂತಹ ಅಧಿಕಾರಿಗಳು ತಕ್ಷಣವೇ ಜಾಗ ಖಾಲಿ ಮಾಡಿ ಎಂದು
ಕೆಎಸ್‌ಡಿ ನಿಗಮದ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದರು.
ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಎಲ್ಲ ಗ್ರಾಪಂ ಪಿಡಿಒಗಳ ಪ್ರಗತಿ ಪರೀಶಿಲನಾ ಸಭೆಯಲ್ಲಿ ಅವರು ಸಭೆ ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ತಾಳಿಕೋಟಿ ಹರನಾಳ,ಮಿಣಜಗಿ, ಬಳಗಾನೂರು ಗ್ರಾಮದ ಮುದ್ದೇಬಿಹಾಳ ಚವನಭಾವಿ ಡೊಂಕಮಡು, ಯರಝರಿ, ಹಂಡರಗಲ್ಲ, ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಅನೇಕ ದೂರುಗಳು ಬಂದಿವೆ. ಇದಕ್ಕೆ ಪ್ರತಿಯಾಗಿ ಜಲಜೀವನ ಮಶಿನ್ (ಜೆಜೆಎಂ) ಕಾಮಗಾರಿ ಸಂಪೂರ್ಣ ಕಳಪೆಯಾಗಿ ನಿರ್ಮಿಸಿದ್ದು, ಈ ಬಗ್ಗೆ ತಾಲೂಕಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ
ಅಧಿಕಾರಿಗಳಿಗೆ ದೂರು ಕೊಟ್ಟರು ಯಾವುದೇ ಪ್ರ ಯೋಜನವಾಗಿಲ್ಲ. ಇದರಿಂದಾಗಿ ಆಯಾ ಗ್ರಾಮ ಗಳಿಗೆ ಜನರಿಗೆ ಸಮರ್ಕಕ ನೀರು ಒದಗಿಸುವಲ್ಲಿ ತೊಂದರೆಯಾಗುತ್ತಿದೆ ಎಂದು ಮಿಣಜಗಿ ಗ್ರಾಮ ಪಂಚಾಯಿತಿ ಪಿಡಿಒ ಭೀಮರಾಯ ಸಾಗರ, ಹಿರೇಮುರಾಳ ಪಿಡಿಒ ಕೆ. ಎಸ್.ಕುಂಬಾರ, ಅಡವಿ ಸೋಮನಾಳ ಪಿಡಿಒ ನಿರ್ಮಲಾ ತೋಟದ ಸೇರಿ ಕೆಲ ಪಿಡಿಒಗಳು ಆರೋಪಿಸಿದರು.
ಈ ವೇಳೆ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಪ್ರತಿಕ್ರಿಯೆ ನೀಡಿ, ಸಂಪರ್ಕಿಸಿದಾಗ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸಿ ಜನರಿಗೆ ಕುಡಿಯುವ ನೀರು ಒದಗಿಸಬೇಕಲ್ಲವೇ ಯಾಕೆ ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಕುಂದುಕೊರತೆ ಆಲಿಸಲು ಯಾವುದೇ ಗ್ರಾಮಕ್ಕೆ ತೆರಳಿದರೂ ಜನರು ಇದೇ ಸಮಸ್ಯೆಯ ಮುಂದಿಡುತ್ತಾರೆ. ಜನರಿಗೆ ಏನೆಂದು ಉತ್ತರಿಸಲಿ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರೂ.
ಈ ಹಿಂದಿನ ಸರ್ಕಾರದಲ್ಲಿ ಸುಮಾರು ಈ 88.96 ಕೋಟಿ ವೆಚ್ಚದಲ್ಲಿ ಮತ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ಕಾಮಗಾರಿ ಪ್ರಾರಂಭಗೊಂಡಿದೆ. ಈ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶವಿದೆ. ಆದರೆ, ಯೋಜನೆಯ ಗುತ್ತಿಗೆದಾರರು ಮನಸೋಇಚ್ಛೆ ಅವೈಜ್ಞಾನಿಕ ಹಾಗೂ ಕಳಪೆಮಟ್ಟದ ಕಾಮಗಾರಿ ನಿರ್ವಹಿಸಿದ್ದರಿಂದ ಜೆಜೆಎಂ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದು ಹೋಗಿದೆ. ಬಹುತೇಕ ಗ್ರಾಮಗಳಲ್ಲಿ ಬೇಕಾಬಿಟ್ಟಿಯಾಗಿ ಜೆಜೆಎಂ ಕಾಮಗಾರಿ ನಡೆಸಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಇನ್ನು ಕೆಲ ಕಡೆ ಸಂಪೂರ್ಣ ಕಾಮಗಾರಿ ಮುಗಿಸಿದರೂ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ನುಂಗಲಾರದ ತುತ್ತಾಗಿ
ಪರಿಣಮಿಸಿದೆ.
ಜೆಜೆಎಂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಜರುಗಿಸಬೇಕು. ಜನತೆಗೆ ಗ್ರಾಮೀಣ ಭಾಗದ ಜನರಿಗೆ ಯಾವುದೆ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆ ಇಇ ಬಸವರಾಜ ಕುಂಬಾರಗೆ ಸೂಚನೆ ನೀಡಿದರು.
ಮುದ್ದೇಬಿಹಾಳ, ತಾಳಿಕೋಟಿ ಮತ್ತು ನಾಲತವಾಡ ಪಟ್ಟಣದಲ್ಲಿ ಪ್ರತಿ ವಾರಕ್ಕೆ ಎರಡರಿಂದ 3 ಬಾರಿ ಕುಡಿವ ನೀರು ಬೀಡುವಂತೆ ನೋಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಬರಗಾಲ ನಿರ್ವಹಣೆ ಸಮರ್ಪಕವಾಗಿ ಎದುರಿಸಲು ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮೂವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಳಿಕೋಟಿ ತಹಸೀಲ್ದಾರ್ ವಿನಯಾ ಹೂಗಾರ, ತಾಪಂ ಇಒ ನಿಂಗಪ್ಪ ಮಸಳಿ, ನಿಡಗುಂದಿ ತಹಸೀಲ್ದಾರ್ ಎ.ಬಿ. ಅಮರೂಢಗಿ, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ,ತಾಪಂ ಯೋಜನಾ ನಿರ್ದೇಶಕ ಖುಬಾಸಿಂಗ್ ಜಾಧವ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ಗ್ರಾಪಂ ಪಿಡಿಒಗಳು ಸೇರಿದಂತೆ ಉಪಸ್ಥಿತರಿದ್ದರು.
ಪಿಡಿಒಗಳು 3 ಮೊಬೈಲ್ ನಂಬರ್ ಇಟ್ಟುಕೊಂಡು ಒಬ್ಬೊಬ್ಬರಿಗೆ ಒಂದೊಂದು ರೀತಿ ಸುಳ್ಳುಗಳನ್ನು ಹೇಳಿ ಜನರ ಭಾವನೆಯಲ್ಲಿ ಕೆಟ್ಟವರಾಗಿದ್ದಾರೆ. ಪಿಡಿಒಗಳು ಸಾರ್ವಜನಿಕರ ಸೇವೆಗೆ ಸದಾಸಿದ್ದವಿರಬೇಕು. ವಸತಿ ರಹಿತ ಬಡ ಕುಟುಂಬಗಳಿಗೆ ಗ್ರಾಮಸಭೆ ಮೂಲಕ ಆಯ್ಕೆಮಾಡಿ ಆಶ್ರಯ ಯೋಜನೆಯಡಿ ಮನೆ ನೀಡಬೇಕು. ರಸ್ತೆ, ಚರಂಡಿ, ಮೂಲಭೂತ ಸೌಕರ್ಯಗಳ ಶುದ್ಧ ಕುಡಿಯುವ ನೀರು ಸೇರಿದಂತೆ ಸೌಲಭ್ಯ ನೀಡಲು ಪ್ರಾಮಾಣಿಕ ಪ್ರಯತ್ನ ನೀಡಬೇಕು ಸಾರ್ವಜನಿಕರ ದೂರು ಸಂಗ್ರಹಕ್ಕೆ ತುರ್ತು ಸೇವಾ ಸಂಪರ್ಕಕ್ಕೆ ಪ್ರತ್ಯೇಕ ಸಹಾಯವಾಣಿ ತೆರೆಯಬೇಕು.
ಶ್ರಿ ಸಿ.ಎಸ್.ನಾಡಗೌಡ ಶಾಸಕರು ಮುದ್ದೇಬಿಹಾಳ