ಇಂಡಿ : ಪಟ್ಟಣದ ಬೇಕರಿ ಅಂಗಡಿಯ ಮಾಲೀಕನಿಗೆ ಪೊಲೀಸ ಭದ್ರತೆ ನೀಡುವಂತೆ ಆಲ್ ಇಂಡಿಯಾ ಬಂಜಾರ್ ಸೇವಾ ಸಂಘದವರು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಪಟ್ಟಣದ ಬೇಕರಿ ಅಂಗಡಿಯ ಮಾಲೀಕ ಮೋಪಸಿಂಗ್ ಪರಮಾರನ್ನು ಕಳೆದ ಹಲವು ದಿನಗಳ ಹಿಂದೆ ಅಪಹರಣ ಮಾಡಿದರು. ಇದೀಗ್ ಅಪಹರಣಕಾರರಿಂದ ಜೀವ ಬೆದರಿಕೆ ಇದೆ ಎಂದು ಪರಮಾರ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದ್ರೂ ಪೊಲೀಸರು ಭದ್ರತೆ ನೀಡುವಲ್ಲಿ ಹಿಂದೇಟು ಹಾಕಿದ್ದು ಖಂಡನೀಯ. ಅದಕ್ಕಾಗಿ ಮಾಲೀಕ ಪರಮಾರಗೆ ಪೊಲೀಸ್ ಭದ್ರತೆ ನೀಡುವಂತೆ ತಹಶಿಲ್ದಾರ ಸಿ ಎಸ್ ಕುಲಕರ್ಣಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಂಜೀವ ಚವ್ಹಾಣ, ವಿಜಯ ರಾಠೋಡ, ಮೋಹನ್ ಲಮಾಣಿ, ಬಾಬು ರಾಠೋಡ, ರಂಗು ಚವ್ಹಾಣ, ಕಮಲ ಜಾಧವ, ಧನರಾಜ ರಾಠೋಡ, ಪಂಡಿತ ರಾಠೋಡ, ವಿಲಾಸ ರಾಠೋಡ, ಅಶೋಕ ಚವ್ಹಾಣ, ಸಂತೋಷ ರಾಠೋಡ, ದಶರಥ ರಾಠೋಡ, ಭೀಮಸಿಂಗ್ ರಾಠೋಡ, ಅವಿನಾಶ್ ರಾಠೋಡ ಉಪಸ್ಥಿತರು.