ಮಾರ್ಟಳ್ಳಿ ಸೇಂಟ್ ಮೇರಿಸ್ ಪ್ರೌಢಶಾಲಾ ಬಾಲಕಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ..
ಹನೂರು : ತಾಲ್ಲೂಕು ಮಟ್ಟದ ಪ್ರೌಢ ಶಾಲಾ ವಿಭಾಗ ಥ್ರೊಬಾಲ್ ಪಂದ್ಯದಲ್ಲಿ ಸೆಂಟ್ ಮೇರಿಸ್ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರು ಪ್ರಥಮ ಸ್ಥಾನ ಗಳಿಸಿ ವಿಜಯ ಶಾಲಿಗಳಾಗಿ ಮುಂದಿನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲೆಗೆ ಕೀರ್ತಿ ತಂದು ಕೊಟ್ಟ ಕ್ರೀಡಾಪಟುಗಳನ್ನೂ ತರಭೇತಿ ನೀಡಿದ ದೈಹಿಕ ಶಿಕ್ಷಕರಾದ ಅಗಸ್ಟಿನ್ ಶಾಲಾ ವ್ಯವಸ್ಥಾಪಕರಾದ ವಂ. ಪಾ. ಟೆನ್ನಿ ಕುರಿಯನ್ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಮ್ಯಾಕ್ಸಿಮ್ ಗೋವಿಯೆಸ್ ಮತ್ತು ಗುರುವೃಂದದವರು ಅಭಿನಂಧಿಸಿರುತ್ತಾರೆ.
ವರದಿ : ಚೇತನ್ ಕುಮಾರ್ ಎಲ್, ತಾಲೂಕು ಹನೂರು, ಚಾಮರಾಜನಗರ ಜಿಲ್ಲೆ.



















