ವಿನಾಯಕ ಎಚ್ ಪಿ ಎಸ್ ಶಾಲೆಯ ವಿಧ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ..
ಇಂಡಿ : ವಿನಾಯಕ ಎಚ್ ಪಿ ಎಸ್ ಶಾಲೆಯ ವಿಧ್ಯಾರ್ಥಿಗಳು ಖೋ ಖೋ ಪಂದ್ಯಾವಳಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟಣದ ವಿಜಯಪುರ ರಸ್ತೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿನಾಯಕ ಎಚ್ ಪಿ ಎಸ್ ಶಾಲೆಯ ಬಾಲಕೀಯರು ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ. ಇನ್ನೂ ಬಾಲಕರು ಖೋ ಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇನ್ನೂ ವ್ಯಯಕ್ತಿಕ 200 ಮೀಟರ್ ಓಟದಲ್ಲಿ ವಿಧ್ಯಾರ್ಥಿನಿ ಶೀವಲಿಲಾ ಸಂಕದ ಪ್ರಥಮ ಸ್ಥಾನ ಪಡೆದು ಶಾಲೆ ಮತ್ತು ಗ್ರಾಮಕ್ಕೆ ಗೌರವ ತಂದಿದ್ದು ಅತ್ಯಂತ ಹೆಮ್ಮೆಯ ವಿಷಯ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಇನ್ನೂ ವಿನಾಯಕ ಎಚ್ ಪಿ ಎಸ್ ಶಾಲೆಯ ದೈಹಿಕ ಶಿಕ್ಷಕ ಹಾಗೂ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ಐರೋಡಗಿ ಮಾರ್ಗದರ್ಶನದಲ್ಲಿ ಈ ವಿಧ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಆಡಳಿತ ಮಂಡಳಿ ವಿಧ್ಯಾರ್ಥಿ ಹಾಗೂ ಶಿಕ್ಷಕರ ಶ್ಲಾಘನೀಯ ಕಾರ್ಯಕ್ಕೆ ಅಭಿನಂದಿಸಿದ್ದಾರೆ.