ವ್ಯಕ್ತಿಯ ಮನೋಲ್ಲಾಸಕ್ಕೆ ಕ್ರೀಡೆ ಅತ್ಯಂತ ಸಹಕಾರಿ: ಎಸ್ ಆರ್ ನಡುಗಡ್ಡಿ
ಇಂಡಿ: ಶಾರೀರಿಕ ವ್ಯಾಯಾಮ ಮತ್ತು ಮನೋಲ್ಲಾಸಕ್ಕೆ ಕ್ರೀಡೆ ಅತ್ಯಂತ ಸಹಕಾರಿ. ಇಂದಿನ ದಿನಗಳಲ್ಲಿ ಕ್ರೀಡೆಯನ್ನು ಜೀವನದ ಭಾಗವಾಗಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಹೇಳಿದರು.
ಅವರು ತಾಲೂಕ ಕ್ರೀಡಾಂಗಣದಲ್ಲಿ ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ತಡವಲಗಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕ್ರೀಡೆ ಮನುಷ್ಯನಿಗೆ ಹೊಸ ಶಕ್ತಿ, ಸ್ಪೂರ್ತಿ, ಚೈತನ್ಯ, ಜೀವನೋತ್ಸವವನ್ನು ಕೊಡುತ್ತದೆ. ಮಗುವಿನ ಬಾಲ್ಯದಲ್ಲಿ ಪ್ರಾರಂಭವಾಗುವ ಕ್ರೀಡಾ ಶಕ್ತಿಯು ವಿಶ್ವ ಸ್ಪರ್ಧೆಗಳಲ್ಲಿ
ಭಾಗವಹಿಸುವಂತೆ ಮಾಡುತ್ತದೆ ಎಂದರು.
ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಎಚ್ ಕೆ ಮಾಳಗೊಂಡ ಮಾತನಾಡಿ, ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲು ಸಾಧ್ಯ. ವಿದ್ಯಾರ್ಥಿಗಳು ಬದ್ಧತೆ ಮತ್ತು ನ್ಯಾಯಯುತವಾಗಿ ಆಡಬೇಕು. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸುದರ್ಶನ ಬೇನೂರ ಹಾಗೂ ಸದಸ್ಯ ರವಿ ಹೊನ್ನಳ್ಳಿ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.ದೈಹಿಕ ಶಿಕ್ಷಕ ಶರಣು ಕಂಠಿಕರ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಹಿರೇರೂಗಿ ಗ್ರಾಮದ ಮುಖಂಡ ಪರಶುರಾಮ ಹೊಸಮನಿ, ಗ್ರಾ ಪಂ ಸದಸ್ಯ ಉಮೇಶ ಹಲಸಂಗಿ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಪರಶುರಾಮ ಹೊಸಮನಿ, ಮಹಿಳಾ ಸದಸ್ಯರಾದ ಪಡೆವ್ವ ನಡುವಿನಮನಿ, ಶಾಲುಬಾಯಿ ಸೈನಸಾಕಳೆ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ ಐರೋಡಗಿ, ತುಕಾರಾಮ ಹೊಸಮನಿ, ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ, ಶಿಕ್ಷಕರಾದ ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ, ಎಸ್ ಬಿ ಕುಲಕರ್ಣಿ, ದೈಹಿಕ ಶಿಕ್ಷಕರು ಸೇರಿದಂತೆ ತಡವಲಗಾ ವಲಯ ಮಟ್ಟದ ಹಿರೇರೂಗಿ, ತಡವಲಗಾ, ನಿಂಬಾಳ, ಹಂಜಗಿ ಕ್ಲಸ್ಟರ್ ವ್ಯಾಪ್ತಿಯ ಶಾಲಾ ಶಿಕ್ಷಕರು ಹಾಗೂ ಕ್ರೀಡಾಪಟು ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಜೇತ ಮಕ್ಕಳಿಗೆ ಪಾರಿತೋಷಕ, ಮೆಡಲ್, ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು.