ಸೇ- 12,13,14 ರಂದು ನಡೆಯಲಿರುವ 9 ನೇ ಗ್ರಾಮ ಪಂಚಾಯತ ನೌಕರರ ರಾಜ್ಯ ಸಮ್ಮೇಳನದ ಬಿತ್ತಿ ಪತ್ರ ಬಿಡುಗಡೆ
ವಿಜಯಪುರ : ಯಾದಗಿರಿಯಲ್ಲಿ ಇದೇ ಸೇಪ್ಟಂಬರ 12,13,14 ರಂದು ನಡೆಯಲಿರುವ 9 ನೇ ಗ್ರಾಮ ಪಂಚಾಯತ ನೌಕರರ ರಾಜ್ಯ ಸಮ್ಮೇಳನದ ಬಿತ್ತಿ ಪತ್ರವನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಅಣ್ಣಾರಾಯ ಇಳಗೇರ ಬಿಡುಗಡೆ ಮಾಡಿ ವಿಜಯಪುರ ಜಿಲ್ಲೆಯಿಂದ ಆಯ್ಕೆ ಮಾಡಿರುವ ಪ್ರತಿನಿಧಿಗಳನ್ನು ಒಳಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಗ್ರಾಮ ಪಂಚಾಯತ ನೌಕರರು ಭಾಗವಹಿಸಿ ರಾಜ್ಯ ಸಮ್ಮೇಳನ ಯಶಸ್ಸಿಗೆ ಸಹಕರಿಸಲು ತಿಳಿಸಿದರು.
ಸಿಐಟಿಯು ಹಲವಾರು ಕಾರ್ಮಿಕ ಸಂಘಟನೆಗಳ ಒಕ್ಕೂಟ ಮತ್ತು ದುಡಿಯುವ ವರ್ಗದ ಜನರಿಗಾಗಿ ಕೆಲಸ ಮಾಡುತ್ತಾ ಬಂದಿದೆ, ನೌಕರರ ಸಮಸ್ಯೆಗಳನ್ನು ಪರಿಹರಿಸಲು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ ಎಂದು ಮತ್ತು ಸಿಐಟಿಯು ಶಿಸ್ತಿನ ಸಂಘಟನೆ ಸಿಐಟಿಯು ನೇತೃತ್ವದಲ್ಲಿ ಹೋರಾಟ ಮಾಡಿದ್ದೇ ಆದಲ್ಲಿ ಗ್ರಾಮ ಪಂಚಾಯತ ನೌಕರರ ಸಮಸ್ಯೆಗಳನ್ನು ಪರಿಹರಿಸಲು ದಾರಿ ದೀಪವಾಗುವುದು ಎಂದು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜವಾಬ್ದಾರಿ ಎಲ್ಲಾ ನೌಕರರ ಮುಖಂಡರ ಮೇಲೆ ಇದೆ ಎಂದು ಹೇಳಿದರು.ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಸುರೇಶ ಜಿ.ಬಿ, ನಾರಾಯಣ ಬಡಿಗೇರ, ಮುತ್ತು ಕೊಂಡಗುಳಿ,ರವಿ ಬಾದರದಿನ್ನಿ, ಜಮೀರ್ ನಧಾಫ, ಬಾಪು ಸಾಹೇಬ್ ಟಕ್ಕಳಕಿ, ಯಲ್ಲನಗೌಡ ಬಿರಾದಾರ, ಬಂದೇ ನವಾಜ್,ಗಣಿಮಠ,ಚಾಂದಸಾಬ ಅಡಾಡಿ, ಯಲ್ಲಪ್ಪ, ಮಾತನಾಡಿದರು.
ಗ್ರಾಮ ಪಂಚಾಯತ ನೌಕರರ ಸಂಘದ ಉಪಾಧ್ಯಕ್ಷ ಶಿವಾನಂದ ಬಿರಾದಾರ ಅಧ್ಯಕ್ಷತೆಯನ್ನು ವಹಿಸಿದ್ದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಾಲಿಕಾರ ಸ್ವಾಗತಿಸಿದರು ಮತ್ತು ಜಿಲ್ಲಾ ಖಜಾಂಚಿ ಲಾಲ್ ಅಹ್ಮದ್ ಶೇಖ ವಂದಿಸಿ ಸಭೆ ಮುಕ್ತಾಯಗೊಳಿಸಿದರು.
ಅಧ್ಯಕ್ಷ ಅಯ್ಯಪ್ಪ ಬಾಗೇವಾಡಿ, ಉಪಾಧ್ಯಕ್ಷ ಶಿವಾನಂದ ಬಿರಾದಾರ, ಕಾರ್ಯದರ್ಶಿ ಚಂದ್ರಶೇಖರ ವಾಲಿಕಾರ, ಖಜಾಂಚಿ ಲಾಲ್ಅಹ್ಮದ ಶೇಖ.



















